ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ವೈದ್ಯರ ದಿನದ ಪ್ರಯುಕ್ತ ತೀರ್ಥಹಳ್ಳಿಯ ತಾಲ್ಲೂಕಿನ ಹೊನ್ನೆತಾಳು ಗ್ರಾಮ ದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ವೈದ್ಯಕೀಯ ಪ್ರಕೋಷ್ಠ, ತೀರ್ಥಹಳ್ಳಿ ಗ್ರಾಮ ಪಂಚಾಯಿತಿ, ತಾಯಿ ಮನೆ, ಜೆಸಿಐ ಹಾಗೂ ಎಲ್ಲ ಸಹಕಾರ ಸಂಘಗಳಿಂದ ಉಚಿತ ಮಕ್ಕಳ ಆರೋಗ್ಯ ತಪಾಸಣೆ, ದಂತ ವೈದ್ಯಕೀಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಆರೋಗ್ಯ ಶಿಬಿರದಲ್ಲಿ 150ಕ್ಕೂಹೆಚ್ಚು ಮಕ್ಕಳು ಮತ್ತು ಹಿರಿಯರನ್ನು ತಪಾಸಣೆ ಮಾಡಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಯಿತು. ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಜನರು ರಕ್ತದಾನದಲ್ಲಿ ಪಾಲ್ಗೊಂಡರು. ವಿಶೇಷವಾಗಿ ತಾಲ್ಲೂಕಿನ ಡಿವೈಎಸ್ಪಿ ಶಾಂತವೀರ್ ಇವರು ರಕ್ತದಾನ ಮಾಡುವುದರ ಮುಖಾಂತರ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಶಿವಮೊಗ್ಗ ಅಶೋಕ ಸಂಜೀವಿನಿ ಆಸ್ಪತ್ರೆಯ ವೈದ್ಯರಾದ ಡಾ. ವಿನಾಯಕ ಹೆಗ್ಡೆ, ಡಾ. ಹೇಮಂತ್, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಡಾ.ಸುರೇಶ್ ಮತ್ತು ತೀರ್ಥಹಳ್ಳಿಯ ದಂತವೈದ್ಯೆ ತಜ್ಞರಾದ ಡಾ. ನಂದ ಕಿಶೋರ್ ಇವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Also read: ಕಲಾವಿದರನ್ನು ಗುರುತಿಸಿ ಮತ್ತಷ್ಟು ಸಾಧನೆಗೆ ಪ್ರೋತ್ಸಾಹಿಸಿ: ಮಂಜುನಾಥ್ ಕದಂ ಕರೆ
ಜೆಸಿಐ ಮತ್ತು ತಾಯಿ ಮನೆಯ ಎಲ್ಲ ಪ್ರಮುಖರು ಸೇರಿ ವೈದ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಎಲ್ಲ ಸಂಘಟನೆಯ ಜವಾಬ್ದಾರಿ ತಾಯಿ ಮನೆಯ ಸುದರ್ಶನ್ ಇವರು ನೆರವೇರಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















