ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ #KWJ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ ಮಾ.9ರ ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಆರ್.ಟಿ.ಒ. ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಉಚಿತ ಕಿವಿ ತಪಾಸಣೆ #Free Ear Check-up ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನೋಂದಣಿ ಕಡ್ಡಾಯವಾಗಿದ್ದು, ಹಿರಿಯರಿಗೆ ಮೊದಲ ಆದ್ಯತೆ. ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ ಇದ್ದರೆ ಜೊತೆಯಲ್ಲಿ ತರಬೇಕು. ಮೊದಲು ನೋಂದಾಯಿಸುವ 35 ಜನರು ಈ ಸೌಲಭ್ಯ ಬಳಸಿಕೊಳ್ಳಬಹುದು.
Also read: ಶಿವಮೊಗ್ಗ | ಮಾರ್ಚ್ 7 | ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಉದ್ಘಾಟನೆ
ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಹೊಂದಿರುವ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಈಶ್ವರ್ ಮಲ್ಪೆ ಟೀಮ್ ನವರು ದೇಣಿಗೆ ಮೊತ್ತದಲ್ಲಿ ಶೇ. 40ರಷ್ಟು ಶ್ರವಣ ಸಾಧನದ ಮೊತ್ತ ಪಾವತಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 91416 30025, 99023 44399 ರಲ್ಲಿ ಸಂಪರ್ಕಿಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post