ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಶ್ರೀ ಸೀತಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜನವರಿ 11ರಿಂದ 18ರವರೆಗೆ ಶ್ರೀ ಸೀತಾಕಲ್ಯಾಣ ಮಹೋತ್ಸವ, ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ, ತೆಪ್ಪೋತ್ಸವ, ಪ್ರತಿದಿನ ವಿವಿಧ ಉತ್ಸವಗಳು ನಡೆಯಲಿವೆ.
- 11ರ ಮಂಗಳವಾರು ಬೆಳಿಗ್ಗೆ ಮಾರುತಿಹೋಮ, ರಾತ್ರಿ ಗರುಡೋತ್ಸವ-ಗಜೇಂದ್ರ ಮೋಕ್ಷ
- 12ರ ಬುಧವಾರ ಬೆಳಿಗ್ಗೆ ಉತ್ಸವರಿಗೆ ಅಭಿಷೇಕ, ರಾತ್ರಿ ಶ್ರೀಸೀತಾ ಕಲ್ಯಾಣ ಮಹೋತ್ಸವ
- 13ರ ಗುರುವಾರ ರಾತ್ರಿ ಶ್ರೀವೈಕುಂಠದ್ವಾರ ಉದ್ಘಾಟನೆ, ಶ್ರೀ ವೈಕುಂಠನಾಥನ ದರ್ಶನ
- 14ರ ಶುಕ್ರವಾರ ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಸ್ನಾನ, ರಾತ್ರಿ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ
- 15ರ ಶನಿವಾರ ಬೆಳಿಗ್ಗೆ ಸುದರ್ಶನ ಹೋಮ, ರಾತ್ರಿ ಉರುಟಣೆ
- 16ರ ಭಾನುವಾರ ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ರಾತ್ರಿ ಶಯನೋತ್ಸವ
- 17ರ ಸೋಮವಾರ ಬೆಳಿಗ್ಗೆ ರಾಮತಾರಕ ಹೋಮ, ರಾತ್ರ ತೆಪ್ಪೋತ್ಸವ
- 18ರ ಮಂಗಳವಾರ ಬೆಳಿಗ್ಗೆ ಮಹಾಭಿಷೇಕ, ರಾತ್ರಿ ಮೋಹಿನಿ ಅಲಂಕಾರ ಉತ್ಸವ
ಜ.2ರ ಭಾನುವಾರ ಎಳ್ಳಮವಾಸ್ಯೆ ಪ್ರಯುಕ್ತ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ದೇವಾಲಯದ ಆವರಣದಲ್ಲಿ ಶಕ್ತದೇವತೆಗಳ ಸಮಾವೇಶ ನಡೆಯಲಿದ್ದು, ದೇವರಿಗೆ ಮಡಲಕ್ಕಿ ಸಮರ್ಪಿಸಲು ಅವಕಾಶವಿದೆ ಎಂದು ಶ್ರೀಸೀತಾರಾಮಾಂಜನೇಯ ಕೈಂಕರ್ಯ ಅಬಿವರ್ಧನಿ ಸಭಾ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post