Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯದ ನಿದಿಗೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ Jain Public School ಫೆ. 4ರಂದು ಸಂಜೆ 4 ಗಂಟೆಗೆ ಫನ್‍ಫೆಸ್ಟ್ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಶಾಲೆಯ ಮಕ್ಕಳು ಮತ್ತು ಅವರ ಪೋಷಕರು, ಶಾಲಾ ಸಿಬ್ಬಂದಿಗಳು ಭಾಗವಹಿಸುವರು ಎಂದು ಪ್ರಾಚಾರ್ಯೆ ಎನ್. ಪ್ರಿಯದರ್ಶಿನಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಕಲಾ ಪ್ರತಿಭೆ ಮತ್ತು ಕಲಿಕೆಯ ಪ್ರತಿಭೆಯನ್ನು ಉತ್ತೇಜನಗೊಳಿಸುವುದು, ಕೌಶಲ್ಯವನ್ನು ಬೆಳೆಸುವುದು ಇದರ ಗುರಿಯಾಗಿದೆ. ಪೋಷಕರಿಗೂ ಸಹ ಮನರಂಜನೆ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಂದ ವಿವಿಧ ರೀತಿಯ ಸ್ಟಾಲ್‍ಗಳು, ಲಕ್ಕಿ ಡ್ರಾ, ಮೋಜಿನ ಆಟ, ಪೋಷಕರಿಗೆ ವಿವಿಧ ಸ್ಪರ್ಧೆ ನಡೆಯಲಿದೆ ಎಂದರು.
ಸಂಜೆ 4ರಿಂದ ರಾತ್ರಿ 8:30ರವರೆಗೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಟ್ಯಾಲೆಂಟ್ ಶೋ, ಗ್ರೂಪ್ ಸಾಂಗ್, ಮಿಸ್ಟರ್ ಆಂಡ್ ಮಿಸೆಸ್ ಜೆಪಿಎಸ್ (ಜೈನ್ ಪಬ್ಲಿಕ್ ಸ್ಕೂಲ್), ಗ್ರೂಪ್ ಡಾನ್ಸ್, ಮಕ್ಕಳಿಗೆ ತಂದೆ ಅಥವಾ ತಾಯಿಯೊಂದಿಗೆ ರ್‍ಯಾಂಪ್ ವಾಕ್ ನಡೆಯಲಿದೆ ಎಂದರು.
ಸ್ಟಾಲ್‍ಗಳಲ್ಲಿ ಆಹಾರ ಪದಾರ್ಥಗಳು, ಜ್ಯೂಸ್, ಬೆವರೆಜಸ್ ಮಾರಾಟ ಮಾಡಲಾಗುವುದು. ಇದರ ಹೊರತಾಗಿ ಮಕ್ಕಳಿಗೆ ಫೇಸ್ ಪೇಂಟಿಂಗ್, ಲಕಿ ಫ್ಯಾಮಿಲಿ, ಏಕಪಾತ್ರಾಭಿನಯ, ಹಾಡು ಮೊದಲಾದ ಸ್ಪರ್ಧೆ ನಡೆಯಲಿದೆ ಎಂದರು.
ಸಂಸ್ಥೆಯಲ್ಲಿ 1ರಿಂದ 10ನೆಯ ತರಗತಿಯವರೆಗೆ ಸುಮಾರು 600 ಮಕ್ಕಳಿದ್ದು ಅವರೆಲ್ಲ ಪೋಷಕರೊಡನೆ ಭಾಗವಹಿಸುವರು. ಮಕ್ಕಳು ಶಾಲೆಯ ಸಿಬ್ಬಂದಿ ಮತ್ತು ಪಾಲಕರೊಡನೆ ಒಂದು ದಿನವನನ್ನು ಸಂತೋಷ, ಆಟೋಟಗಳೊಂದಿಗೆ ಮುಕ್ತವಾಗಿ ಕಳೆಯಲು ಈ ದಿನವನ್ನು ನಡೆಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಾಲೆಯ ಸಂಚಾಲಕಿ ದಿವ್ಯಾ ಶೆಟ್ಟಿ, ಸಿಇಓ ಸುಮಂತ್ ಮತ್ತು ವ್ಯವಸ್ಥಾಪಕ ವಿಜಯ್‍ಕುಮಾರ್ ಹಾಜರಿದ್ದರು.
Discussion about this post