ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿನನಿತ್ಯ ಪ್ರಕಟಗೊಳ್ಳುವ ದಿನ ಪತ್ರಿಕೆಗಳ ಸಂಪಾದಕರಗಳ ಒಕ್ಕೂಟವಾದ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ತುಂಗಾತರಂಗ ದಿನ ಪತ್ರಿಕೆಯ ಸಂಪಾದಕ ಎಸ್ ಕೆ ಗಜೇಂದ್ರ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಹ್ಯಾದ್ರಿ ದಿನಪತ್ರಿಕೆಯ ಸಂಪಾದಕ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದ್ದು, ಖಜಾಂಚಿಯಾಗಿ ಹೊಸ ನಾವಿಕ ದಿನಪತ್ರಿಕೆಯ ಸಂಪಾದಕ ರಾಕೇಶ್ ಡಿಸೋಜಾ ಅವರನ್ನು ನೇಮಕ ಮಾಡಲಾಗಿದೆ.

ಸಂಘದ ಉಪಾಧ್ಯಕ್ಷರಾಗಿ ರಂಜಿತ್, ಭರತೇಶ್, ಹಿತಕರ್ ಜೈನ್, ಸುಭಾಷ್, ಕಾರ್ಯದರ್ಶಿಗಳಾಗಿ ನಾಗರಾಜ್ ಶೆಣೈ, ಲಿಯಾಕತ್, ರಾಘವೇಂದ್ರ, ಸಹ ಕಾರ್ಯದರ್ಶಿಗಳಾಗಿ ಜಿ. ಚಂದ್ರಶೇಖರ, ಹೆಚ್.ಎನ್. ಮಂಜುನಾಥ್ ಆಯ್ಕೆ ಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಗಳ 25ಕ್ಕೂ ಹೆಚ್ಚು ಸಂಪಾದಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post