ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ದೈನಂದಿನ ಬದುಕಿನಲ್ಲಿ ಸತ್ಯ ಮತ್ತು ಅಹಿಂಸಾತ್ಮಕ ಜೀವನ ನಡೆಸಲು ಗಾಂಧೀಜಿ ಸದಾ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಅಭಿಪ್ರಾಯಪಟ್ಟರು.
ಎನ್ಇಎಸ್ ನಿರ್ದೇಶಕರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಮಾತನಾಡಿ ಶಿಕ್ಷಣದ ಅವಶ್ಯಕತೆ, ಗುಡಿ ಗೃಹ ಕೈಗಾರಿಕೆಗಳ ಮಹತ್ವವನ್ನು ಸಾರಿದವರು ಮಹಾತ್ಮ ಗಾಂಧೀಜಿ. ಅಂತಹ ಮಾತುಗಳ ಪ್ರೇರಣೆಯ ಪ್ರತಿಫಲವಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಮಲೆನಾಡಿನ ದೊಡ್ಡ ಕೊಡುಗೆಯಾಗಿ ರೂಪಗೊಂಡಿತು. ಜೊತೆಯಲ್ಲಿ ಎನ್ಇಎಸ್ ಸಾಬೂನು ಮತ್ತು ಬೆಂಕಿಪೊಟ್ಟಣಗಳ ಕೈಗಾರಿಕೆ ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗವಕಾಶ ನೀಡಲಾಗಿತ್ತು. ಅಂತಹ ಪ್ರತಿಯೊಂದು ಕಾರ್ಯಗಳಿಗೆ ಪ್ರೇರಣೆಯಾದವರು ಮಹಾತ್ಮ ಗಾಂಧೀಜಿ ಎಂದು ಸ್ಮರಿಸಿದರು.
Also read: ಜೀವನ ಸಂಜೆ ವೃದ್ದಾಶ್ರಮಕ್ಕೆ ಶುದ್ಧ ನೀರಿನ ಘಟಕ ಹಸ್ತಾಂತರ
Discussion about this post