ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಾರಗಟ್ಟಲೆ ಕಸ ಸಂಗ್ರಹಕ್ಕೆ ಪಾಲಿಕೆ ವಾಹನ ಬಾರದ ಹಿನ್ನೆಲೆ ಕಸದ ಬುಟ್ಟಿಯನ್ನು ನಡುರಸ್ತೆಗೆ ತಂದಿಟ್ಟುಕೊಂಡು ಮಹಿಳೆಯರು ಪ್ರತಿಭಟನೆ ನಡೆಸಿದರು.
ನಗರದ ಗೋಪಾಲಗೌಡ ಬಡಾವಣೆಯ ಡಿ – ಬ್ಲಾಕ್’ನ 6ನೇ ಅಡ್ಡರಸ್ತೆಯಲ್ಲಿ ಇಂದು ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಕಸದು ಬುಟ್ಟಿಗಳನ್ನು ಇರಿಸಿ, ಮಹಿಳೆಯರು ಪ್ರತಿಭಟನೆ ನಡಸಿದರು.
ಒಮ್ಮೆ ಕಸ ಸಂಗ್ರಹ ಮಾಡಿ ಹೋದರೆ ಐದಾರು ದಿನ ಕಳೆದರೂ ಪಾಲಿಕೆ ಕಸ ಸಂಗ್ರಹ ವಾಹನ ಬರುವುದಿಲ್ಲ. ಈ ಕುರಿತು ಕಾರ್ಪೊರೇಟರ್ ಅವರಿಗೆ ಕರೆ ಮಾಡಿದರೂ ಸ್ಪಂದಿಸುವುದಿಲ್ಲ. ನಮ್ಮ ಏರಿಯಾದಲ್ಲಿ ಮೂಲ ಸೌಕರ್ಯವನ್ನು ಒದಗಿಸಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಕಸ ಸಂಗ್ರಹ ವಾಹನಗಳು ದೌಡು:
ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಎರಡು ಕಸ ಸಂಗ್ರಹ ವಾಹನಗಳನ್ನು ಕಳುಹಿಸಿದರು. ವಾಹನಗಳನ್ನು ತಡೆದು ನಿಲ್ಲಿಸಿದ ಮಹಿಳೆಯರು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೆ ಪರಿಸ್ಥಿತಿ ಮುಂದುವರೆದರೆ ಹೋರಾಟ ತೀವ್ರಗೊಳಿಸುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶೃತಿ ಗೀತೇಂದ್ರ ಗೌಡ, ಲಕ್ಷ್ಮೀ, ಮಂಜುಳಾ, ಮಂಜುನಾಥ್, ಪವನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post