ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತವರು ಮರೆಯುವ ಪ್ರಶ್ನೆಯೇ ಇಲ್ಲ. ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಬರುವುದಿಲ್ಲ ಎಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್ #Geetha Shivarajkumar ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸುಮಾರು 5.35 ಲಕ್ಷ ಮತಗಳು ಬಂದಿವೆ. ಇದೇನು ಕಡಿಮೆಯೇನಲ್ಲ. ಕಳೆದ ಸಲಕ್ಕಿಂತಲೂ ದುಪ್ಪಟ್ಟು ಮತ ಪಡೆದಿರುವೆ. ಚುನಾವಣೆ ಎಂದರೆ ಸೋಲು, ಗೆಲುವು ಇದ್ದೇ ಇರುತ್ತದೆ. ಯಾರಾದರೂ ಒಬ್ಬರು ಗೆಲ್ಲಲೇ ಬೇಕಲ್ಲವೇ? ಚುನಾವಣೆಯಲ್ಲಿ ನಾವು ಮತ್ತು ನಮ್ಮ ಪಕ್ಷ ಮಾಡಬೇಕಾದ ಕೆಲಸ ಮಾಡಿದ್ದೇವೆ. ಗೆಲ್ಲುವ ವಿಶ್ವಾಸವಿತ್ತು. ಆದರೆ, ಸೋತಿದ್ದೇನೆ. ಗೆದ್ದವರಿಗೆ ಅಭಿನಂದನೆ. ಅವರು ಒಳ್ಳೆಯ ಕೆಲಸ ಮಾಡಲಿ ಎಂದರು.
Also read: ಉಗ್ರರ ದುಷ್ಕೃತ್ಯಕ್ಕೆ 10 ಮಂದಿ ಯಾತ್ರಾರ್ಥಿಗಳು ಬಲಿ | ಘಟನೆ ನಡೆದಿದ್ದೆಲ್ಲಿ?
ಸೋಲಿನ ಹೊಣೆಯನ್ನು ಯಾರ ಮೇಲೂ ಹೊರಿಸಲು ನನಗೆ ಇಷ್ಟವಿಲ್ಲ. ಸೋಲಿನ ಹೊಣೆಯನ್ನು ನಾವು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಾವು ಯಾರೂ ತಪ್ಪು ಮಾಡಿಲ್ಲ. ಎಲ್ಲರೂ ಅವರವರ ಕೆಲಸ ಮಾಡಿದ್ದಾರೆ. ಬಿಸಿಲು ಎನ್ನದೇ, ನನ್ನ ಪರವಾಗಿ ನನಗಿಂತ ಹೆಚ್ಚು ಕೆಲಸವನ್ನು ಮಹಿಳಾ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಮಾಡಿದ್ದಾರೆ. ಸೋತಿರಬಹುದು ಅದಕ್ಕಾಗಿ ದುಃಖವಿಲ್ಲ. ಮುಂದೆ ಚುನಾವಣೆಗಳು ಮತ್ತೆ ಬರುತ್ತವೆ. ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post