ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮತ ಕ್ಷೇತ್ರದಲ್ಲಿ ಹಿಂದೆ ಇದ್ದ ಲಿಂಗಾನುಪಾತ ಹೆಚ್ಚಾಗಿದ್ದು, ಈ ವಿಚಾರ ಬಿಎಲ್’ಒ ಸರ್ವೇ ಕಾರ್ಯದಿಂದ ತಿಳಿದುಬಂದಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿರುವ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಬಿಎಲ್‌ಓಗಳ ಮನೆ ಮನೆ ಸರ್ವೇ ಕಾರ್ಯ ಶೇ.100 ಆಗಿದೆ. ಸರ್ವೇ ನಂತರ ಎಲ್ಲ ಮತ ಕ್ಷೇತ್ರಗಳಲ್ಲಿ ಲಿಂಗ ಅನುಪಾತ ಹೆಚ್ಚಾಗಿದೆ. ಸರ್ವೇಗೂ ಮುನ್ನ 1013.95 ಇದ್ದ ಲಿಂಗಾನುಪಾತ ಸರ್ವೇ ನಂತರ 1017.7 ಆಗಿದೆ. ಹಾಗೂ 18-19 ವರ್ಷದ ಲಿಂಗಾನುಪಾತ 0.46 ರಿಂದ 1.29 ನಷ್ಟು ಹೆಚ್ಚಾಗಿದೆ ಎಂದರು.
ಇನ್ನು, 2023 ರ ಜನವರಿ 05 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಅರ್ಜಿ ವಿವರ
- ಹೊಸದಾಗಿ ಹೆಸರು ಸೇರ್ಪಡೆಗೆ ಬಂದ ಅರ್ಜಿ ಸಂಖ್ಯೆ: 1,15,096
- ಅಪ್’ಡೇಟ್ ಮಾಡಲಾಗಿರುವ ಅರ್ಜಿ ಸಂಖ್ಯೆ: 145539
- ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ: 5,584
- ಬಾಕಿ ಇರುವ ಅರ್ಜಿಗಳ ಸಂಖ್ಯೆ:973
- ನಮೂನೆ 7 ರಲ್ಲಿ ಬಂದ ಅರ್ಜಿಗಳ ಸಂಖ್ಯೆ: 1,43,575
- ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ: 3341
- ಅನುಮೋದನೆಗೊಂಡ ಅರ್ಜಿಗಳ ಸಂಖ್ಯೆ: 140227
- ನಮೂನೆ 8 ರಲ್ಲಿ ಹೆಸರು, ಸಂಬAಧ ಬದಲಾವಣೆ, ತಪ್ಪು ವಯಸ್ಸು ತಿದ್ದುಪಡಿಗೆ ಬಂದ ಅರ್ಜಿಗಳ ಸಂಖ್ಯೆ: 91,434
- ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ: 4259
- ಅಪ್’ಡೇಟ್ ಮಾಡಲಾದ ಅರ್ಜಿಗಳ ಸಂಖ್ಯೆ: 87,173
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post