ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಲಿಬ್ #Galib ವಿಶ್ವದ ಶ್ರೇಷ್ಟ ಸಂತಕವಿ. ಅವರ ಕವಿತೆಗಳು ವರ್ತಮಾನಕ್ಕೆ ಪ್ರತಿಬಿಂಬವಾಗಿವೆ ಎಂದು ಕುವೆಂಪು ವಿವಿ ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಅವರು ಇಂದು ಕುವೆಂಪು ವಿವಿ #Kuvempu VV ಸ್ನಾತಕೋತ್ತರ ಉರ್ದು ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಉರ್ದು ಅಕಾಡೆಮಿ ಬೆಂಗಳೂರು, ಸಹ್ಯಾದ್ರಿ ಕಲಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಕಾಲೀನ ಕಾಲದಲ್ಲಿ ಕವಿ ಗಾಲಿಬ್ ಕುರಿತ ಎರಡು ದಿನದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಾಲಿಬ್ ಅವರ ಕಾವ್ಯದಲ್ಲಿ ಭೂತ ಕಾಲದ ವ್ಯವಸ್ಥೆ ವರ್ತಮಾನದಲ್ಲಿ ಹೊಂದಿಕೊಂಡು ಭವಿಷ್ಯದ ಪ್ರತಿಬಿಂಬದಂತಿದೆ. ಅವರು ಉರ್ದು ಮತ್ತು ಪರ್ಷಿಯನ್ ಭಾಷೆಯಲ್ಲಿ ಅತ್ಯುತ್ತಮ ಕವಿತೆಗಳನ್ನು ಬರೆದಿದ್ದಾರೆ. ಯಾವುದೇ ಭಾಷೆಯಲ್ಲಿ ಕವಿತೆ ಬರೆಯುವಾಗ ಅದರ ಸೌಂದರ್ಯ ಮತ್ತು ಸಾತ್ವಿಕತೆ ಪರಿಣಾಮ ಬೀರುತ್ತದೆ. ಅನುವಾದಕ್ಕಿಂತ ಮೂಲ ಭಾಷೆಯಲ್ಲಿ ಓದುವುದರಿಂದ ಹೆಚ್ಚು ಸೊಗಸು ಉಂಟಾಗುತ್ತದೆ ಎಂದರು.
ಕೆನಡಾದಿಂದ ವರ್ಚುಯಲ್ ಮೂಲಕ ಮಾತನಾಡಿದ ಪ್ರಸಿದ್ಧ ಕವಿ ಡಾ. ಸೈಯದ್ ತಾಖೀ ಅಬೀದಿ ಅವರು, ಗಾಲಿಬ್ ಮೊಘಲ್ ಯುಗದ ಅತ್ಯಂತ ಶ್ರೇಷ್ಟ ಕವಿಯಾಗಿದ್ದಾರೆ. ಮೊಘಲ್ ಯುಗವು ಭಾರತಕ್ಕೆ ತಾಜ್‍ಮಹಲ್ ನಂತಹ ಉತ್ತಮ ಕೊಡುಗೆಯ ಜೊತೆಗೆ ಉರ್ದು ಹಾಗೂ ಪರ್ಷಿಯನ್ ಭಾಷೆಯ ಕವಿ ಮಿರ್ಜಾ ಗಾಲಿಬ್ ಅವರನ್ನು ನೀಡಿದೆ. ಅವರು ಒಬ್ಬ ಮಹಾನ್ ಕವಿಯಾಗಿದ್ದಾರೆ ಎಂದರು.
ಕರ್ನಾಟಕ ಉರ್ದು ಅಕಾಡಮಿ ಸದಸ್ಯ ಆಜಂ ಶಾಹಿದ್ ಮಾತನಾಡಿ, ಗಾಲಿಬ್ ಎಲ್ಲರಿಗಿಂತ ಶ್ರೇಷ್ಟ ಕವಿಯಾಗಿದ್ದಾರೆ. ಅವರ ಕಾವ್ಯದಲ್ಲಿ ಆತ್ಮ ಸಮರ್ಪಣೆ. ಅಹಂಕಾರ ಮತ್ತು ಜೀವನದ ಆಳವಾದ ತಾತ್ವಿಕತೆ ಇದೆ ಎಂದರು.
Also read: ಸೊರಬ | ಶ್ರೀ ಮಾತಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಫೆ.27ರಿಂದ ವಾರ್ಷಿಕ ವರ್ಧಂತಿ ಉತ್ಸವ
ಪ್ರೊ. ಸೈಯದ್ ಸಜ್ಜಾ ಹುಸೇನ್ ಮಾತನಾಡಿ, ಕವಿತೆ ಒಂದು ಜೀವನ ಕ್ರಮವಾಗಿದೆ. ಗಾಲಿಬ್ ಹೃದಯ ತಟ್ಟಿದ ಕವಿ. ಮಾನವೀಯ ಸಂವೇದನೆಗಳನ್ನು ಕವಿತೆಯ ಮೂಲಕ ಪ್ರಸ್ತುಪಡಿಸಿದವರು. ಕನ್ನಡ ಸೇರಿದಂತೆ ಜಗತ್ತಿನ ಅನೇಕ ಭಾಷೆಗಳಿಗೆ ಅವರ ಕವಿತೆಗಳು ಅನುವಾದಗೊಂಡಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಸೈಯದ್ ಸನಾವುಲ್ಲಾ, ಗಾಲಿಬ್ ಮಾನವತಾವಾದದ ಕವಿ. ಅವರ ಕವಿತೆಗಳು ರಾಷ್ಟ್ರೀಯ ಭಾವೈಕ್ಷತೆ ಸಾರುತ್ತವೆ. ಈಗಿನ ಕಾಲದ ಸಂಸ್ಕøತಿ, ರಾಜಕಾರಣ ಮತ್ತು ಜೀವನ ಕ್ರಮದ ಬಗ್ಗೆ ಶತಮಾನಗಳ ಹಿಂದೆಯೇ ಬರೆದಿದ್ದಾರೆ ಎಂದರು.
ಈ ಎರಡು ದಿನಗಳ ಸಮ್ಮೇಳನದಲ್ಲಿ 60 ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತಿವೆ. ಇದರಲ್ಲಿ 42 ಪ್ರಬಂಧಗಳು ಆಫ್ ಲೈನ್ ಮತ್ತು 18 ಪ್ರಬಂಧಗಳು ಆನ್ಲೈನ್ ನಲ್ಲಿ ಪ್ರಸ್ತುತಪಡಿಸಲಾಗುವುದು. ಈ ಸಮ್ಮೇಳನ ಉರ್ದು ವಿಭಾಗದಲ್ಲಿ ಆಯೋಜಿಸಿದ ಪ್ರಥಮ ಅಂತರರಾಷ್ಟ್ರೀಯ ಸಮ್ಮೇಳನ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರೊ. ಸೈಯದ್ ಕಲೀಲ್ ಅಹಮ್ಮದ್, ಪ್ರೊ.ಕೆ.ವಿ. ನಿಕೋಲಾ, ಪ್ರೊ. ತಮೀಮ್ ಅಹಮ್ಮದ್, ಡಾ. ಬಿ. ಮೊಹಮ್ಮದ್ ದಾವೂದ್ ಮೊಯ್ಸಿನ್, ಪ್ರೊ. ಮೊಹಮ್ಮದ್ ನಿಸಾರ್ ಅಹ್ಮದ್ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಗಾಲಿಬ್ ಅವರ ಕೃತಿ ಬಿಡುಗಡೆ ಮಾಡಲಾಯಿತು ಮತ್ತು ಪ್ರಬಂಧಗಳು ಮಂಡನೆಯಾದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post