ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾವಂತನಾಗಿ ಬೆಳೆದ ಮನುಷ್ಯನಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶೃಂಗೇರಿ ಜಗದ್ಗರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು #Vidhushekara Bharathi Shri of Shringeri Mutt ಹೇಳಿದರು.
ಅವರು ಇಲ್ಲಿಯ ಎಲ್.ಬಿ.ಎಸ್. ನಗರದಲ್ಲಿ ನೂತನವಾಗಿ ಆರಂಭವಾದ ಆರ್ಯ ವಿಜ್ಞಾನ ಪಿ.ಯು. ಕಾಲೇಜನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಚಿಕ್ಕಂದಿನಿಂದಲೇ ವಿದ್ಯಾಭ್ಯಾಸವನ್ನು ಕೊಡುವ ಮೂಲಕ ಅವರನ್ನು ಸುಸಂಸ್ಕøತರನ್ನಾಗಿಸಬಹುದು. ವಿದ್ಯಾಭ್ಯಾಸದ ಜೀವನ ಒಂದು ಸುವರ್ಣಾವಕಾಶ. ವಿದ್ಯೆಯನ್ನು ಪಡೆಯುವಾಗ ಮಕ್ಕಳು ಯಾವುದೇ ದುರಭ್ಯಾಸಕ್ಕೆ ಅದರಲ್ಲಿಯೂ ವಿಶೇವಾಗಿ ಮೊಬೈಲ್ ಗೀಳಿಗೆ ಈಡಾಗಬಾರದು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಾತ್ರ ಓದದೇ ಓದಿದ ವಿದ್ಯೆ ಎಷ್ಟು ಎಂಬುದಕ್ಕೆ ಪರೀಕ್ಷೆ ಬರೆಯಬೇಕು ಎಂದ ಅವರು, ಮಕ್ಕಳು ತಮ್ಮ ತಂದೆ, ತಾಯಿಗಳು, ಗುರುಗಳು ಹೇಳಿದ್ದನ್ನು ಕೇಳಬೇಕು. ಅವರಿಗೆ ವಿಶೇಷ ಗೌರವವನ್ನು ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಕೆಲವು ವಿಚಾರಗಳು ಹಳೆಯ ಕಾಲದ್ದಾದರೂ ಅವು ಇವತ್ತಿಗೂ ಪ್ರಸ್ತುತವಾಗಿವೆ. ಇವುಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
Also read: ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿ: ಕಾರ್ಯಕ್ರಮಗಳ ವಿವರ ಇಲ್ಲಿದೆ
ಸನಾತನ ಹಿಂದೂ ಸಂಸ್ಕøತಿ ಅತ್ಯಂತ ಉತ್ಕøಷ್ಟವಾದುದು. ಎಲ್ಲಿದ್ದರೂ ನಮ್ಮ ಸಂಸ್ಕøತಿ ಮರೆಯಬಾರದು. ಇದು ನಮಗೆ ವಿಶ್ವಾಸ ಮತ್ತು ಗೌರವ ಬರುವಂತೆ ಮಾಡುತ್ತದೆ. ನಮ್ಮ ಸಂಸ್ಕøತಿ ಆಚರಣೆಯಲ್ಲಿ ಯಾವುದೇ ಮುಜುರ ಇರಬಾರದು. ನಾವು ಅಂದುಕೊಂಡ ಫಲ ದೊರೆಯಬೇಕಾದರೆ ಅದಕ್ಕೆ ವಿಶೇಷ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು.
ಇದಕ್ಕೂ ಮುನ್ನ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಕಾಲೇಜಿನ ನಾಮಫಲಕ ಅನಾವರಣಗೊಳಿಸಿ ಬಳಿಕ ವಿದ್ಯಾಧಿದೇವತೆ ಶ್ರೀ ಸರಸ್ವತಿ ಪೂಜೆ ನೆರವೇರಿಸಿದರು. ಪ್ರಯೋಗಾಲಯ ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀ ಶಂಕರಮಠದ ಧರ್ಮಾಧಿಕಾರಿ ಡಾ.ಪಿ. ನಾರಾಯಣ್, ಡಾ. ಪರಮೇಶ್, ಸಿದ್ಧಾರ್ಥ್ ಕೆ., ಮೋನಿಷಾ ಸಿದ್ಧಾರ್ಥ್, ಬಿ.ಜೆ. ಸುನಿತಾದೇವಿ, ಎಸ್. ಮುಕುಂದ್, ಡಾ. ರಾಧಿಕಾ ದೇವಿ, ಮಾಜಿ ಸಂಸದ ಆಯನೂರು ಮಂಜುನಾಥ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post