ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪೋಷಕರು #Parents ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ #Education ಕೊಡಿಸುವುದು ಎಷ್ಟು ಮುಖ್ಯವೋ ಮನೆಯಲ್ಲಿ ಸಂಸ್ಕಾರ ಕಲಿಸುವುದೂ ಸಹ ಅಷ್ಟೇ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaya Sarji ಕಿವಿ ಮಾತು ಹೇಳಿದರು.
ಜಿಲ್ಲೆಯ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ #Jain Public School ಸಂಗಮ್ ಥೀಮ್ ಅಡಿಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಶೈಕ್ಷಣಿಕ ಜ್ಞಾನ ಎಷ್ಟು ಮುಖ್ಯವೋ ಸಂಸ್ಕಾರದ #Culture ಪಾಠವೂ ಸಹ ಅಷ್ಟೇ ಮುಖ್ಯ. ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಹಸಿವೆ ಎಂದರೇನು ಎಂಬುದನ್ನು ಕಲಿಸಬೇಕು. ಆಗ ಮಾತ್ರ ಅವರಿಗೆ ಜೀವನ ಎಂದರೆ ಏನು ಎಂಬುದು ತಿಳಿಯುತ್ತದೆ ಎಂದರು.
Also read: ಹೊಸನಗರ | ಮೀಸಲು ಅರಣ್ಯದಲ್ಲಿ ಅಕ್ರಮ ಮರಳು ದಂಧೆ: ಕೇಸ್
ಮಕ್ಕಳಿಗೆ ಹಸಿವು ಹಾಗೂ ಆಹಾರದ ಬೆಲೆ ಏನು ಎಂಬುದನ್ನು ಕಲಿಸಿದಾಗ ಅವರು ಮಹಾದೇವನಾಗುತ್ತಾರೆ. ಇದರೊಂದಿಗೆ ಇತರರಿಗೆ ದಾನ ಕೊಡುವ ಮನಃಸ್ಥಿತಿಯನ್ನು ಮಕ್ಕಳಿಗೆ ಕಲಿಸಬೇಕು. ಇಂತಹ ಗುಣವನ್ನು ಮಕ್ಕಳಲ್ಲಿ ಬೆಳೆಸಿದಾಗ ಅದು ಅವರನ್ನು ಪರಿಪೂರ್ಣವಾಗಿಸುವತ್ತ ಕರೆದೊಯ್ಯುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಮಾತ್ರ ಗಮನವಿರಿಸಿಕೊಂಡು ಹಗಲಿರುಳು ಶ್ರಮಿಸಬೇಕು. ಸಮರ್ಪಣಾ ಭಾವದಿಂದ ಕಲಿತಾಗ ಮಾತ್ರ ವಿದ್ಯೆಯ ಸಿದ್ದಿ ಸಾಧ್ಯ. ಇದರೊಂದಿಗೆ ಮಕ್ಕಳಲ್ಲಿ ಸಂಘಟನಾ ಶಕ್ತಿಯನ್ನು ಕಲಿಸಿ. ಕಲಿಯುಗದಲ್ಲಿ ಸಂಘಟನೆಗೆ ಅತ್ಯಂತ ಮಹತ್ವವಿದ್ದು, ಒಗ್ಗಟ್ಟಿನ ಪ್ರಾಮುಖ್ಯತೆ ಏನು ಎಂದು ಅರಿತರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ #Areca Tea Inventor Nivedan Nempe ಮಾತನಾಡಿ, ಮಕ್ಕಳ ಭವಿಷ್ಯ ಕುರಿತಾಗಿ ಮಕ್ಕಳೇ ಕನಸು ಕಾಣಬೇಕೇ ಹೊರತು ಅದು ಪೋಷಕರ ಕನಸಾಗಬಾರದು. ಪೋಷಕರು ತಾವು ಕಂಡ ಕನಸನ್ನು ನನಸು ಮಾಡಲು ಮಕ್ಕಳ ಮೇಲೆ ಒತ್ತಡ ಹೇರಬಾರದು. ಇದರಿಂದ ಮಕ್ಕಳ ಮನಸ್ಸು, ಶಕ್ತಿ ಸಾಮರ್ಥ್ಯ ಕುಂಠಿತವಾಗುವ ಸಾಧ್ಯತೆ ಇರುತ್ತದೆ ಎಂದರು.
ಕೇವಲ ವ್ಯಾವಹಾರಿಕ ಶಿಕ್ಷಣ ಕಲಿತು ಅಮೇರಿಕಾದಂತಹ ದೇಶಗಳಿಗೆ ತೆರಳಿ ಜೀವನ ಕಟ್ಟಿಕೊಳ್ಳುವುದೇ ಸಾಧನೆಯಲ್ಲ. ಇಂದು ನಮ್ಮ ದೇಶದಿಂದ ಪ್ರತಿಭಾ ಪಲಾಯನವಾಗಿ, ನಮ್ಮ ಮಕ್ಕಳು ಶಾಶ್ವತವಾಗಿ ವಿದೇಶಗಳಲ್ಲಿ ನೆಲೆಸುತ್ತಿದ್ದಾರೆ ಎಂದರೆ ಅದಕ್ಕೆ ಪೋಷಕರೇ ಕಾರಣವಾಗಿರುತ್ತಾರೆ. ಈ ರೀತಿ ವಿದೇಶಗಳಲ್ಲಿ ನಮ್ಮ ಮಕ್ಕಳು ನೆಲೆಸುವುದರಿಂದ ಇಲ್ಲಿನ ಪ್ರೀತಿ, ಬಾಂಧವ್ಯ ಹಾಗೂ ಸಂಬAಧಗಳ ಗಾಢತೆ ಕಡಿಮೆಯಾಗಿ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂದರು.
ಶಾಲೆ ವಾರ್ಷಿಕ ಸಮಗ್ರ ವರದಿಯನ್ನು ಪ್ರಾಂಶುಪಾಲರಾದ ಪ್ರಿಯದರ್ಶಿನಿ ಮಂಡಿಸಿದರು.
ದೇಶ ವಿದೇಶಗಳ ನೃತ್ಯ ಪ್ರಾಕಾರ ಅನಾವರಣ
ವಾರ್ಷಿಕೋತ್ಸವದ ನಿಮಿತ್ತ ವಿವಿಧ ರೀತಿಯ ಸಾಂಸ್ಕೃತಿಕ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ಪ್ರಮುಖವಾಗಿ, ರಷ್ಯಾ, ಟರ್ಕಿ ಸೇರಿದಂತೆ ಹಲವು ದೇಶಗಳಿಂದ ಆರಂಭಿಸಿ ಮಲೆನಾಡಿನ ಸ್ಥಳೀಯ ಮಟ್ಟದ ನೃತ್ಯಗಳನ್ನು ಅವುಗಳ ಮೂಲ ಪ್ರಾಕಾರ ಹಾಗೂ ವಸ್ತ್ರ ಶೈಲಿಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಆಯಾ ದೇಶದ ನೃತ್ಯ ಪ್ರದರ್ಶನದ ವೇಳೆ ವೀಡಿಯೋ ಮೂಲಕ ಆ ದೇಶಗಳ ಪ್ರಾಕೃತಿಕ ಹಾಗೂ ಸಾಂಸ್ಕೃತಿಕತೆಯನ್ನು ಬಿತ್ತರಿಸಿದ್ದು ವಿಭಿನ್ನವಾಗಿತ್ತು.
ಇದರೊಂದಿಗೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಕರಾಟೆ ಶೈಲಿ ಹಾಗೂ ಪಟ್ಟುಗಳು ಪ್ರೇಕ್ಷಕರ ಮನಗೆದ್ದವು.
ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ, ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಶಾಲೆಯ ಸಿಒಒ ಆರ್. ಸುಮಂತ್, ಸೌಲಭ್ಯ ವ್ಯವಸ್ಥಾಪಕ ಎಸ್. ವಿಜಯ್ ಕುಮಾರ್, ಶಾಲೆ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post