ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಮನ ಅಯೋಧ್ಯೆ, ಕೃಷ್ಣನ ಮಥುರಾ ಹಾಗೂ ಈಶ್ವರನ ಕಾಶಿಯನ್ನು ಕಾನೂನಾತ್ಮಕವಾಗಿಯೇ ನಮಗೆ ಹಿಂತಿರುಗಿ ಕೊಟ್ಟುಬಿಡಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಯೋಧ್ಯೆ ಈಗಾಗಲೇ ನಮಗೆ ಸಿಕ್ಕಿದೆ. ಇನ್ನೇನು ಕಾಶಿಯೂ ಸಿಗುತ್ತದೆ. ಕಾಶಿ ನಮಗೆ ಸಿಗುತ್ತದೆ ಎನ್ನುವುದಕ್ಕೆ ಅಲ್ಲಿ ಈಶ್ವರ ಲಿಂಗ ದೊರೆತಿದೆ ಎಂದು ವರದಿಯಾಗಿರುವುದೇ ಸಾಕ್ಷಿ ಎಂದರು.
Also read: ಕಾಸ್ಮೆಟಿಕ್ ಸರ್ಜರಿ ಅವಾಂತರ! ಕನ್ನಡ ಕಿರುತೆರೆ ನಟಿ ಚೇತನಾರಾಜ್ ನಿಧನ
ಐದು ಹೆಣ್ಣು ಮಕ್ಕಳು ತಮ್ಮ ಧಾರ್ಮಿಕ ಹಕ್ಕಿಗಾಗಿ ನ್ಯಾಯಾಲಯಕ್ಕೆ ಮೊರ ಹೋಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆ ಆಗಿದೆ. ನಾವು ನಮ್ಮ ದೇವಾಲಯಗಳನ್ನು ಕಾನೂನಾತ್ಮಕವಾಗಿಯೇ ಪಡೆಯುತ್ತೇವೆ. ಹೀಗಾಗಿ, ಈಗ ಪ್ರಕರಣ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಸರ್ಕಾರ ತಲೆ ಹಾಕುವುದಿಲ್ಲ. ಎಲ್ಲವನ್ನೂ ನಾವು ಕಾನೂನಾತ್ಮಕವಾಗಿಯೇ ಪಡೆಯುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post