ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೆಸ್ ಸಭಾಂಗಣದಲ್ಲಿ ಏ.26 ಮತ್ತು 27ರಂದು ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ನಿನ ಸಂಸ್ಥಾಪನ ದಶಮಾನೋತ್ಸವ ಸಮಾರಂಭ ಹಾಗೂ ಅಖಿಲ ಭಾರತ ವಿಷ್ಣು ಸಹಸ್ರನಾಮ #Vishnu Sasranaama ರಾಷ್ಟ್ರೀಯ ಸಮಾವೇಶವು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಫೇಡರೇಷನ್ನಿನ ಶಿವಮೊಗ್ಗ ಪ್ರಾಂತ್ಯದ ಪ್ರಮುಖ ಎಸ್.ದತ್ತಾತ್ರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು ಆಧ್ಯಾತ್ಮಿಕ ಚಿಂತಕರು. ದಾಸ ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ವಿದ್ವಾಂಸರು, ಖ್ಯಾತ ವಾಗ್ಮಿಗಳೂ ಆಗಿದ್ದಾರೆ. ರಾಮಾಯಣ ಮಹಾಭಾರತ ಹಾಗೂ ಹಲವು ಗ್ರಂಥಗಳ ಕುರಿತು ಉಪನ್ಯಾಸ ನೀಡಿದ್ದಾರೆ. ಈಗ ವಿಷ್ಣು ಸಹಸ್ರನಾಮದ ಪಾರಾಯಣದ ಸಮವೇಶದ ಮುಖ್ಯಸ್ಥರಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದರು.
ಪೂರ್ಣಿಮಾ ಪ್ಯಾಲೇಸಿನ ಸಭಾಂಗಣದಲ್ಲಿ ಈ ಸಮ್ಮೇಳನ ಮತ್ತು ಪಾರಾಯಣದ ಕಾರ್ಯಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಪತ್ನಿ ಸಿವಶ್ರೀ ಸ್ಕಂದ ಪ್ರಸಾದ್ ದಂಪತಿಗಳು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರ ಮೂಲಕ ಉದ್ಘಾಟಿಸುವರು. ಅಂದೇ ಸಂಜೆ 5-30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಚಕ್ರಾಬ್ಜ ಮಂಡಲಪೂಜಾ ಮತ್ತು ಅರ್ಚನೆ ನಡೆಯುವುದು ಎಂದರು.
ಏ.27ರಂದು ಬೆಳಿಗ್ಗೆ 6ಗಂಟೆಗೆ ಸುಪ್ರಭಾತ. ನಂತರ ಶಾಲಾ ಮಕ್ಕಳಿಂದ ವಿಷ್ಣು ಸಹಸ್ರನಾಮ ಪಾರಾಯಣ, ಹೋಮ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯುವುದು. ಬೆಳಿಗ್ಗೆ 10-30ಕ್ಕೆ ಅಖಿಲ ಭಾರತ ವಿಷ್ಣು ಸಹಸ್ರನಾಮ ಸಮ್ಮೇಳನ ಆರಂಭವಾಗುವುದು. ನಂತರ ವಿಷ್ಣು ಸಹಸ್ರನಾಮ ದೀಕ್ಷಾ ಮಹೋತ್ಸವ, ಬಳಿಕ 4-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಈ ಅಖಿಲ ಭಾರತ ಮಟ್ಟದ ವಿಷ್ಣು ಸಹಸ್ರನಾಮ ಸಮ್ಮೇಳನಕ್ಕೆ ರಾಜ್ಯ ಮತ್ತು ರಾಷ್ಟ್ರದ ಹಾಗೂ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ವಿಶೇಷ ಅಹ್ವಾನಿತರು, ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರದ ಸಾಧಕರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವಿಶಿಷ್ಟವಾದ ಮತ್ತು ವಿಶೇಷವಾದ ವಿಷ್ಣು ಸಹಸ್ರನಾಮ ಪಾರಾಯಣ ಸಮ್ಮೇಳನಕ್ಕೆ ಶಿವಮೊಗ್ಗದಿಂದಲೂ ಸುಮಾರು 500ಕ್ಕೂ ಹೆಚ್ಚು ವಿಷ್ಣು ಸಹಸ್ರನಾಮ ಪಠಣ ಮಾಡುವವರು ತೆರಳಲಿದ್ದಾರೆ. ಇದರಲ್ಲಿ ಸುಮಾರು 100 ಜನರಿಗೆ ಉಚಿತ ಬಸ್, ಉಚಿತ ವಸತಿ, ಊಟೋಪಚರದ ವ್ಯವಸ್ಥೆ ಮಾಡಲಾಗಿದೆ. ಮೊದಲು ಹೆಸರು ನೋಂದಾಯಿಸದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತಿ ಇರುವವರು ಮೊ.9964072793, 9845380465ನ್ನು ಸಂಪರ್ಕಿಸಿ ತಮ್ಮ ಬರುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀರಂಜಿನಿ ದತ್ತಾತ್ರಿ ಮಾತನಾಡಿ, ವಿಷ್ಣು ಪಾರಾಯಣ ಎಂದರೆ ಕೇವಲ ಮಾತೆಯರು ಮಾತ್ರ ಪಠಣ ಮಾಡುವುದಲ್ಲ. ಪುರುಷರೂ ಕೂಡ ಮಾಡಬಹುದು. ಈ ಪಾರಾಯಣದಿಂದ ಮಾನಸಿಕ ಆರೋಗ್ಯ, ನೆಮ್ಮದಿ, ಶಾಂತಿ ಸಿಗುತ್ತದೆ. ಹಾಗಾಗಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೆಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮಾಚಾರ್ ಜೋಯಿಸ್, ಶಶಿಕಾಂತ್ ನಾಡಿಗ್, ಎನ್.ರ್ಶರೀಧರ್, ಕುಮಾರಶಾಸ್ತ್ರೀ, ಶಬರೀಶ್ ಕಣ್ಣನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post