ಸಮಾಜಕ್ಕಾಗಿ ತನುಮನಧನ ಸಮರ್ಪಿಸಿ ಸಮಾಜದ ಬೇರನ್ನು ಗಟ್ಟಿಗೊಳಿಸಿದ ಹಿರಿಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಇತರರಿಗೆ ಪ್ರೇರಣೆಯಾಗುತ್ತದೆ. ಗಿಡದಲ್ಲಿನ ಫಲಗಳನ್ನು ಮಾತ್ರ ನೋಡುವುದಲ್ಲ. ಅದರ ಬೇರುಗಳನ್ನು ಕೂಡ ಗಮನಿಸಬೇಕು ಎಂದರು.
Also read: ಡಾ.ಎಸ್.ಪಿ. ಪದ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ಫೆ.1, 2ರಂದು ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮನುಷ್ಯ ಬುದ್ಧಿ ಜೀವಿ ಆದರು ಅನೇಕ ಅಪರಾಧಗಳನ್ನು ಯಾಕೆ ಮಾಡುತ್ತಾನೆ. ದೇವರು ಅವನಿಗೆ ಒಳ್ಳೆ ಬುದ್ಧಿ ಕೊಡಬಹುದಲ್ಲವೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತದೆ. ನಾವು ಕರೆಂಟ್ ಸ್ವಿಚ್ ಹಾಕಿದಾಗ ಮಾತ್ರ ಪವರ್ ಬರುತ್ತದೆ. ಆ ಪವರ್ ಅಂದರೆ ದೇವರು, ಸ್ವಿಚ್ ಹಾಕುವುದು ನಾವೇ. ಶಕ್ತಿಯನ್ನು ದೇವರು ಕೊಡುತ್ತಾನೆ. ಆದರೆ ನಾವು ಮಾಡಿದ ಒಳ್ಳೆಯ ಕರ್ಮಗಳಿಗೆ ಫಲ ಸಿಗುತ್ತದೆ. ನಾವು ಏನು ಮತ್ತು ಏಕಾಗಿ ಮಾಡುತ್ತೇವೆ ಎಂಬ ಹರಿವು ಇರಬೇಕು. ಹಿರಿಯರ ಸಲಹೆಯನ್ನು ಪಡೆಯಬೇಕು. ನಾನು ಎಲ್ಲ ದೇವರ ಕಾರ್ಯಗಳನ್ನು ಮಾಡುತ್ತೇನೆ. ಕರ್ತವ್ಯ ಮಾಡುತ್ತೇನೆ. ಆದರೂ ನನಿಗೆ ಸುಖವಿಲ್ಲ ಎಂದು ಕೆಲವರು ದುಃಖ ಪಡುತ್ತಾರೆ. ಆದರೆ ಮೊದಲೆ ಸ್ಥಾನದಲ್ಲಿ ಇದ್ದವನು ದೇವರು ಪೀಚೆ ಮೋಡು ಎಂದಾಗ ಕೊನೆಯ ಸ್ಥಾನಕ್ಕೆ ಹೋಗುತ್ತಾನೆ. ಕೊನೆಯಲ್ಲಿ ಇದ್ದವನು ಮೊದಲಿಗೆ ಬರುತ್ತಾನೆ ಎಂದರು.
ಸುಧಾಮ, ಭಕ್ತ ಪ್ರಹ್ಲಾದ, ಪಾಂಡವರ ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ದೇವರ ಅನುಗ್ರಹವಿದ್ದರೆ ಏನು ಬೇಕಾದರು ಆಗಬಹುದು. ಜನನ ಮತ್ತು ಮರಣ ಎರಡು ನಮ್ಮ ಕೈಯಲ್ಲಿ ಇಲ್ಲ. ಅದರ ನಡುವಿನ ಯಶಸ್ಸು ಮಾತ್ರ ನಮ್ಮ ಕೈಯಲ್ಲಿದೆ. ಮಕ್ಕಳಿಗೆ ದೇವರ ಹೆಸರಿಡಿ, ದೇವರು ನೆನೆಯುತ್ತಿದ್ದರೆ, ಕರೆನ್ಸಿ ರಿಚಾರ್ಜ್ ಆದ ಹಾಗೆ. ಪುಣ್ಯ ಎಂಬ ಕರೆನ್ಸಿ ಚಾರ್ಜ್ ಆಗುತ್ತಿರುತ್ತದೆ. ಸಮಾಜ ಮತ್ತು ದೇವರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ, ದೇವರು ಕೊಟ್ಟ ಅವಕಾಶವನ್ನು ಸತ್ಕರ್ಮ ಮಾಡಲು ಬಳಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸಮಾಜ ಅಧ್ಯಕ್ಷರಾದ ಬಿ.ಭಾಸ್ಕರ್ ಕಾಮತ್, ಪ್ರಮುಖರಾದ ಬಿ.ಎಸ್.ಕಾಮತ್, ದೇವದಾಸ್ ನಾಯಕ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post