ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಅಶೋಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಅಶೋಕ ರಸ್ತೆಯಲ್ಲಿ ಮನೆಗೆಲಸ ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ಇಬ್ಬರು ಬೈಕ್ ಸವಾರರು ಹಿಂದಿ ಭಾಷೆಯಲ್ಲಿ ವಿಳಾಸ ಕೇಳಿ, ಈ ವಿಳಾಸಗೊತ್ತಿಲ್ಲವೆಂದು ಹೇಳಿ ಮುಂದೆ ಹೋಗುತ್ತಿದ್ದಂತೆ ಕುತ್ತಿಗೆಗೆ ಕೈಹಾಕಿ ಬಂಗಾರದ ಸರವನ್ನ ಕಿತ್ತುಕೊಂಡಿದ್ದಾರೆ. ತಕ್ಷಣವೇ ಮಹಿಳೆ ಸರವನ್ನ ಹಿಡಿಕೊಂಡ ಪರಿಣಾಮ 15 ಗ್ರಾಂ ಸರದಲ್ಲಿ 6 ಗ್ರಾಂ ಸರ ಅಪರಿಚಿತನ ಕೈ ಸೇರಿದೆ.

Also read: ನೆರವು ನೀಡುವ ಸಮಾರಂಭದಲ್ಲಿ ಕಾಲ್ತುಳಿತ: 85 ಮಂದಿ ಸಾವು











Discussion about this post