ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಆರ್ಥಿಕತೆಗೆ ಫೌಂಡ್ರಿ ಉದ್ಯಮದ ಕೊಡುಗೆ ಅಪಾರ ಎಂದು ಎಯುಎಂಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಸಪ್ಲೆ ಚೈನ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಸೌರೆನ್ ಪಾಲ್ ಹೇಳಿದರು.
ಮಲ್ನಾಡ್ ಶೈರ್ ಇಕೋ ರೆಸಾರ್ಟ್ ನಲ್ಲಿ ಆಯೋಜಿಸಿದ್ದ 63ನೇ ಐಐಎಫ್ ದಕ್ಷಿಣ ವಲಯದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಭಾರತ ಸರ್ಕಾರದ ಮುಂದಿನ ಅಭಿವೃದ್ಧಿ ಯೋಜನೆಗಳಿಂದ ಕೈಗಾರಿಕಾ ಉತ್ಪಾದನಾ ವಲಯಕ್ಕೆ ಉತ್ತಮ ಬೇಡಿಕೆ ಸೃಷ್ಟಿಯಾಗಲಿ ಎಂದು ತಿಳಿಸಿದರು.

Also read: ವಾಸುದೇವಾಚಾರ್ಯರ ಮನೆಯಲ್ಲಿ ಹಾಡಿದವರೇ ಧನ್ಯರು | ವಿದ್ವಾನ್ ಶೃಂಗೇರಿ ನಾಗರಾಜ್ ಸಂತಸ
ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಮಾತನಾಡಿ, ದೇಶದ ಕೈಗಾರಿಕಾ ವಲಯದ ಬೆಳವಣಿಗೆಯಲ್ಲಿ ಐಐಎಫ್ ಮಹತ್ತರ ಪಾತ್ರ ವಹಿಸಿದ್ದು, ಐಐಎಫ್ ದಕ್ಷಿಣ ವಲಯದ ಹೊಸ ತಂಡ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಹೇಳಿದರು.

ಐಐಎಫ್ ದಕ್ಷಿಣ ವಲಯ ನೂತನ ಅಧ್ಯಕ್ಷ ಡಿ.ಜಿ.ಬೆನಕಪ್ಪ ಮಾತನಾಡಿ, ಸೇವೆ ಹಾಗೂ ಭವಿಷ್ಯದ ತಂತ್ರಜ್ಞಾನ, ಉತ್ಪಾದನೆಯಲ್ಲಿ ಹೊಸ ಪರಿಕಲ್ಪನೆ, ಫೌಂಡ್ರಿ ಉದ್ಯಮದ ಸದಸ್ಯರಿಗೆ ಸಹಕಾರಿಯಾಗುವ ತಾಂತ್ರಿಕ ಕಾರ್ಯಕ್ರಮಗಳು, ಹಸರೀಕರಣ, ಕಾರ್ಯಪದ್ಧತಿಯ ಸುಧಾರಣೆ, ರಫ್ತು ತರಬೇತಿ, ಯುವ ಉದ್ಯಮಿಗಳು/ವಿದ್ಯಾರ್ಥಿಗಳಿಗೆ ತಯಾರಿಕಾ ವಲಯಕ್ಕೆ ಆಕರ್ಷಿಸಲು ಪ್ರೇರಣೆ ನೀಡುವುದು, ಉದ್ಯೋಗಿಗಳಿಗೆ ಪ್ರತಿಭೆ, ಕಾರ್ಯತತ್ಪರತೆ ಹಾಗೂ ಸೃಜನಶೀಲತೆ ಹೆಚ್ಚಿಸಲು ಶಿಕ್ಷಣ ಮತ್ತು ತರಬೇತಿ, ಪ್ರಮಾಣಪತ್ರ ನೀಡುವುದು ಹಾಗೂ ಇನ್ನಿತರೆ ಉಪಯೋಗಿ ಕಾರ್ಯಕ್ರಮಗಳ ಮುಖಾಂತರ ಸದಸ್ಯರ ಸೇವೆಗೆ ಹಾಗೂ ಐಐಎಫ್ ಬೆಳವಣಿಗೆಗೆ ಪ್ರಯತ್ನ ಮಾಡಲು ಬದ್ಧ ಎಂದು ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post