ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸ್ಕೃತ ಅಧ್ಯಯನದಿಂದ ಸಾತ್ವಿಕ ಗುಣಗಳನ್ನು ಕಲಿಯಲು, ಅಳವಡಿಸಿಕೊಳ್ಳಲು ಸಾಧ್ಯ ಎಂದು ಕುವೆಂಪು ವಿಶ್ವ ವಿದ್ಯಾಯಲಯದ Kuvempu University ಉಪ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ತಿಳಿಸಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ Sahyadri Arts College ಕುವೆಂಪು ವಿಶ್ವವಿದ್ಯಾಲಯ, ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತ ಸಾಹಿತ್ಯದಲ್ಲಿ ಸ್ವಾಸ್ಥ್ಯರಕ್ಷಣೆಯ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕೀರಣದ ಉದ್ಘಾಟನೆಯನ್ನು ಧನ್ವಂತರಿ ಪೂಜೆ ಹಾಗೂ ದೀಪಜ್ವಾಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆಯಲ್ಲಿ ಒಳ್ಳೆಯ ಅಂಶಗಳಿವೆ, ವೇದ ಉಪನಿಷತ್ತುಗಳಲ್ಲಿ ಯಾವುದೇ ತಾಮಸಿಕ ಗುಣಗಳನ್ನು ಹೇಳಿಕೊಡುವುದಿಲ್ಲ, ಎಲ್ಲಾ ಭಾಷೆಗಳಿಗೆ ಮಾತೃ ಭಾಷೆ ಸಂಸ್ಕೃತ ಹಾಗಾಗಿ ಭಾರತದ ಸಂಸ್ಕೃತಿಯನ್ನು ಪ್ರತಿಪಾದಿಸುವುದು ಸಂಸ್ಕೃತ ಎಂದು ತಿಳಿಸಿದರು.
Also read: ಅಮೆರಿಕಾದಲ್ಲಿ ಜೇಮ್ಸ್ ಚಿತ್ರ ಎಷ್ಟು ಥೀಯೇಟರ್’ನಲ್ಲಿ ರಿಲೀಸ್ ಆಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ
ಸಂಸ್ಕೃತಕ್ಕೆ ಯಾರೂ ವೀರೋಧ ಮಾಡಬಾರದು, ಎಲ್ಲರೂ ಸಂಸ್ಕೃತ ಕಲಿಯಬೇಕು. ಸಂಸ್ಕೃತ ಕಲಿತವರು ಕನಿಷ್ಟ ಹತ್ತು ಜನರಿಗಾದರೂ ಕಲಿಸಬೇಕು, ಸಂಸ್ಕೃತ ವೈಜ್ಞಾನಿಕವಾದ ಭಾಷೆ, ಸಂಸ್ಕೃತ ಗಣಿತ, ವಿಜ್ಞಾನ ಮುಂತಾದ ವಿಷಯಗಳಿಗೆ ಅತ್ಯಂತ ಪೂರಕವಾಗಿದೆ ಎಂದರು.
ಸರ್ವರಿಗೂ ಸದಾ ಅಶಯವನ್ನು ಬಯಸುವ ಸಂಸ್ಕೃತ ವಿಶ್ವಕ್ಕೆ ಮಾದರಿಯಾಗಿದೆ, ಇಂತಹ ಇತಿಹಾಸವುಳ್ಳ ಸಂಸ್ಕೃತ ಭಾಷೆಯ ಬೆಳವಣಿಗೆಗೆ ನಮ್ಮ ವಿಶ್ವ ವಿದ್ಯಾಲಯ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಬಿ. ಧನಂಜಯ ಸಮಾರಂಭದ ಅಧ್ಯಕ್ಷತೆಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವೇದ ಸಂಸ್ಕೃತ ಅಕಾಡೆಮಿ ನಿರ್ಧೆಶಕರು ಹಾಗೂ ಪ್ರಧಾನ ಸಂಪಾದಕರಾದ ಡಾ.ಗೋಪಾಲಕೃಷ್ಣ ಹೆಗಡೆ, ಡಾ. ದಿನಕರ ಮರಾಠೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post