ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೈನ್ ಪಬ್ಲಿಕ್ ಶಾಲೆಯ #Jain Public School ವಿದ್ಯಾರ್ಥಿ ಕೆ.ಎನ್. ವಿನೀತ್ ರಾವ್ ಸಿಬಿಎಸ್ಇ 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈನ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಪ್ರಿಯದರ್ಶಿನಿ ಎನ್., ನಮ್ಮ ಶಾಲೆ ಆರಂಭವಾಗಿ 11 ವರ್ಷಗಳಾಗಿವೆ. ಕಳೆದ 5 ವರ್ಷದಿಂದ 10ನೇ ತರಗತಿಯಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ನಮ್ಮ ಶಾಲೆಗೆ ಕೆ.ಎನ್. ವಿನೀತ್ ರಾವ್ ಶೇ. 98.6ರಷ್ಟು ಅಂಕ ಪಡೆಯುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರು.
ಈ ವಿದ್ಯಾರ್ಥಿ ಕನ್ನಡದಲ್ಲಿ 100, ವಿಜ್ಞಾನ 99, ಇಂಗ್ಲಿಷ್ 98, ಸಮಾಜ ವಿಜ್ಞಾನ 98, ಗಣಿತ 98, ಐಟಿ 98 ಅಂಕ ಪಡೆದಿದ್ದಾರೆ. ಅದೇ ರೀತಿ ಶ್ರೇಯಾ ಎಂ.ಎನ್. ಶೇ. 93, ನಂದಿನಿ ಶೇ. 89 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದ ಅವರು, ಪರೀಕ್ಷೆಗೆ ಕುಳಿತಿದ್ದ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
ಸಾಮಾನ್ಯವಾಗಿ ಕೆಲವು ಶಾಲೆಗಳು ಕಡಿಮೆ ಅಂಕ ಬಂದರೆ ಟಿಸಿ ಕೊಟ್ಟು ಕಳಿಸುತ್ತಾರೆ. ಅದು ತಪ್ಪು. ಒಬ್ಬ ವಿದ್ಯಾರ್ಥಿಯನ್ನು ಹೀಗೆ ತಿರಸ್ಕರಿಸುವುದು ಸರಿಯಲ್ಲ. ಆದರೆ ನಮ್ಮ ಶಾಲೆಯಲ್ಲಿ ಕಡಿಮೆ ಅಂಕ ಬಂದವರನ್ನೂ ಕೂಡ ಸೂಕ್ತ ಮಾರ್ಗದರ್ಶನ ಪಾಠ ಮಾಡಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿ ಹೆಚ್ಚಿನ ಅಂಕ ಪಡೆಯುವಂತೆ ಮಾಡಿದ್ದೇವೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆ ಪ್ರಯತ್ನಿಸುತ್ತಿದೆ ಎಂದರು.
ವಿನೀತ್ ರಾವ್ ಮಾತನಾಡಿ, ಶ್ರದ್ಧೆ ಆತ್ಮವಿಶ್ವಾಸವಿದ್ದರೆ ಎಂತಹ ಪರೀಕ್ಷೆಗಳನ್ನಾದರೂ ಎದುರಿಸಬಹುದಾಗಿದೆ. ನನ್ನ ಈ ಸಾಧನೆಗೆ ಪ್ರಮುಖವಾಗಿ ನನ್ನ ತಂದೆ, ತಾಯಿ ಹಾಗೂ ಶಾಲೆಯ ಉಪಾಧ್ಯಾಯರು ಮತ್ತು ಸಿಬ್ಬಂದಿ ಕಾರಣರಾಗಿದ್ದಾರೆ. ಉಪಾಧ್ಯಾಯರು ಉತ್ತಮವಾಗಿ ಪಾಠ ಮಾಡಿದ್ದಾರೆ. ನಮ್ಮ ಸಂದೇಹಗಳನ್ನು ಸಮರ್ಥವಾಗಿ ಪರಿಹರಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ನಾನು ಈ ಸಾಧನೆ ಮಾಡಿದ್ದೇನೆ. ನನ್ನ ಸಾಧನೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಐಎಎಸ್ ಮಾಡುವ ಗುರಿ ಹೊಂದಿದ್ದೇನೆ ಎಂದರು.
Also read: ಮಲೆನಾಡಿನಲ್ಲಿ ಅಕ್ರಮ ಶಿಕಾರಿ? ಯುವಕನ ಎದೆ ಸೀಳಿಕೊಂಡು ಹೋಯ್ತು ಮಿಸ್ ಫೈರ್ ಆದ ಗುಂಡು
ಶ್ರೇಯಾ ಮಾತನಾಡಿ, ಎಲ್ಲರೂ ಶಾಲೆಯಲ್ಲಿ ಆತ್ಮವಿಶ್ವಾಸ ನೀಡಿ ಪ್ರೋತ್ಸಾಹಿಸಿದ್ದಾರೆ. ಮತ್ತು ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿ ಧೈರ್ಯ ತುಂಬಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನೀತ್ ರಾವ್ ಪೋಷಕರಾದ ನಾಗೇಶ್, ವಾರಿಜಾ, ಶಾಲೆಯ ಸೌಲಭ್ಯ ವ್ಯವಸ್ಥಾಪಕ ವಿಜಯಕುಮಾರ್, ಆರ್. ಸುಮಂತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post