ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವ ದರ್ಜೆ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಆರ್ಯ ವಿಜ್ಞಾನ ಪದವಿ ಪೂರ್ವ ಕಾಲೇಜು ನಗರದಲ್ಲಿ ಆರಂಭವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದಾಖಲಾಗಿ ನಡೆದಿದೆ.
ಈ ಕುರಿತಂತೆ ಮಾತನಾಡಿದ ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ್, ಎಲ್’ಬಿಎಸ್ ನಗರದ 2ನೇ ತಿರುವಿನಲ್ಲಿರುವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ 2024-25 ನೇ ಈ ವರ್ಷದಿಂದಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಸುಸಜ್ಜಿತ ಕಟ್ಟಡ, ಅಡ್ವಾನ್ಡ್ ಲ್ಯಾಬ್
ವಿದ್ಯಾರ್ಥಿಗಳ ಸರ್ವತೋಮುಖ ದೃಷ್ಠಿಯನ್ನು ಇಟ್ಟುಕೊಂಡು, ಉದಯೋನ್ಮುಖ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಲಿದೆ. ಎಲ್’ಬಿಎಸ್ ನಗರದ ಪ್ರಧಾನ ಸ್ಥಳದಲ್ಲಿ ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಈ ಕಾಲೇಜಿನಲ್ಲಿದೆ ಎಂದರು.
Also read: ತಮಿಳುನಾಡಿಗೆ ಹೋಗಿದ್ದು ಮದುವೆ ಸೀರೆ ತರಲು | ಸಿಲುಕಿದ್ದು ನೀತಿಸಂಹಿತೆಯಲ್ಲಿ | ಅ.ನಾ. ವಿಜಯೇಂದ್ರ ಪಟ್ಟ ಪರಿಪಾಟಲು
ಅನುಭವಿ ಉಪನ್ಯಾಸಕರ ತಂಡ
ಬಹುಮುಖ್ಯವಾಗಿ ನುರಿತ ಅನುಭವಿ ಮತ್ತು ವೃತ್ತಿಪರ ಉಪನ್ಯಾಸಕರು ವಿವಿಧ ರಾಜ್ಯಗಳ ಕಾಲೇಜುಗಳಲ್ಲಿ 25 ಕ್ಕೂ ಹೆಚ್ಚು ವರ್ಷ ಬೋಧನೆ ಮಾಡಿದ ಅನುಭವವಿರುವ ಶಿಕ್ಷಕರು ಇಲ್ಲಿ ಭೋದಕರಾಗಿರುತ್ತಾರೆ. ಪಿಯು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಲ್ಲದೇ ತಮ್ಮ ಜೀವನದ ಬಹು ಮುಖ್ಯವಾಗಿ ಎದಿರುಸುವ ಪರೀಕ್ಷೆಗಳಾದ ಕೆಸಿಇಟಿ/ ನೀಟ್ ಮತ್ತು ಜೆಇಇ ಹಾಗೂ ಐಐಟಿ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದರು.
ಲಾಂಗ್ ಟರ್ಮ್ ನೀಟ್ ಕೋಚಿಂಗ್
ಅವುಗಳನ್ನು ಎದುರಿಸಲು ಯಶಸ್ಸು ಪಡೆಯಲು ವೃತ್ತಿ ಪರವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ನಡೆಸಲಾಗುವುದು. ಕೇವಲ ಪಿಯು ವಿದ್ಯಾರ್ಥಿಗಳಲ್ಲದೇ ಮೇಲ್ಕಂಡ ಪರೀಕ್ಷೆಗಳನ್ನು ಕಟ್ಟಲು ಬಯಸುವ ವಿದ್ಯಾರ್ಥಿಗಳಿಗೂ ಲಾಂಗ್ ಟರ್ಮ್ ನೀಟ್ ಕೋಚಿಂಗ್ ನೀಡಲಾಗುವುದು. ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಭೌತ್ತಶಾಸ್ತ್ರವನ್ನು ಎಂ. ಗಣೇಶ, ಗಣಿತ ಶಾಸ್ತçವನ್ನು ಕೆ. ರಮಣರೆಡ್ಡಿ, ರಸಾಯನ ಶಾಸ್ತ್ರವನ್ನು ಟಿ.ಎಸ್. ಆಚಾರ್ಯ ಹಾಗೂ ಜಿ.ರಾಧಕೃಷ್ಣ, ಬಯಲಾಜಿ ವಿಷಯವನ್ನು ಸಿ. ಕಣ್ಣನ್ ಬೋಧಿಸಲಿದ್ದಾರೆ. ಇವರೆಲ್ಲರೂ ಹೈದ್ರಾಬಾದ್ ಆಂಧ್ರಪ್ರದೇಶದ ವಿಜಯವಾಡ, ಬೆಂಗಳೂರು ಮುಂತಾದ ಅನೇಕ ಕಡೆಗಳಲ್ಲಿ ಪಾಠ ಮಾಡಿದ ಅನುಭವವಿದೆ. ಸುಮಾರು 25 ವರ್ಷಕ್ಕೂ ಹೆಚ್ಚು ಕಾಲ ಬೋಧನೆ ಮಾಡಿದ್ದಾರೆ. ಜೊತೆಗೆ ನೀಟ್ ಹಾಗೂ ಐಐಟಿ-ಜೆಇಇ ಕೋಚಿಂಗ್ ಕೂಡ ಅನುಭವವಿದೆ. ಪ್ರಾಂಶುಪಾಲರಾಗಿ ನವೀನ್ ಕುಮಾರ್ ಇವರು ಕಾಲೇಜಿನ ಆಡಳಿತದ ಜವಾಬ್ದಾರಿ ಹೊತ್ತಿದ್ದಾರೆ ಎಂದರು.
ಪ್ರಾಂಶುಪಾಲ ನವೀನ್ ಕುಮಾರ್ ಮಾತನಾಡಿ, ಉತ್ತಮ ಕಾಲೇಜು ಶಿಕ್ಷಣಕ್ಕಾಗಿ ಶಿವಮೊಗ್ಗದ ಮಕ್ಕಳು ಬೆಂಗಳೂರು, ಧಾರವಾಡ, ಮಂಗಳೂರು, ಹೈದ್ರಾಬಾದ್ ಮುಂತಾದ ಕಡೆ ಹೋಗಬೇಕಿತ್ತು. ಆದರೆ ಈಗ ಅದರ ಅವಶ್ಯಕತೆ ಇಲ್ಲ. ಶಿವಮೊಗ್ಗದಲ್ಲಿಯೇ ಈ ಎಲ್ಲಾ ಸೌಲಭ್ಯಗಳು ಸಿಗಲಿವೆ ಎಂದರು.
ನುರಿತ ಬೋಧಕರು ಉತ್ತಮ ಕಟ್ಟಡ ಆಧುನಿಕ ಪ್ರಯೋಗಾಲಯ ಗ್ರಂಥಾಲಯ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯಿದ್ದು, ಪ್ರಸಕ್ತ ವರ್ಷದಿಂದಲೇ ಆರಂಭವಾಗಲಿರುವ ಆರ್ಯ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಪ್ರವೇಶಾತಿ ಇಂದಿನಿಂದಲೇ ಆರಂಭವಾಗಿದೆ. ಕೆಲವೇ ಸೀಟುಗಳು ಇರುವ ಕಾರಣ ಆಸಕ್ತರು ತಕ್ಷಣವೇ ಕಾಲೇಜನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ: 94481 23344, 08182-251408, 90080 24448 ನ್ನು ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕರುಗಳಾದ ಟಿ.ಎಸ್. ಆಚಾರ್ಯ, ಗಣೇಶ್, ಡಾ.ರಾಧಕೃಷ್ಣ, ಸಿ. ಕಣ್ಣನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post