ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ತಾಲ್ಲೂಕು ಅನುದಾನಿತ ಬಿ-ವಲಯ ಮಟ್ಟದ ಬಾಲಕ ಬಾಲಕೀಯರ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಫರ್ಧೆಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್. ಎನ್. ದೇವರಾಜ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅರುಣ್, ಪ್ರೇಮ್ ಕುಮಾರ್, ಅಜಯ್ ಕುಮಾರ್, ಸೃಜನ್ ಶೆಟ್ಟಿ, ಮಾಲತೇಶ್, ಶ್ರೀಕಾಂತ್, ಪಾಂಡು, ಅಂಜನಿ, ದೃಶ್ಯ, ಶಿವಕುಮಾರ್, ಸೈಯದ್ ರಿಹಾನ್ ಅಲಿ, ಹೇಮಂತ್ ಅಚಾರ್, ದೀಕ್ಷಿತ್.ಎಂ.ಇ, ಆಕಾಶ್.ಎಂ, ದಿವ್ಯ.ಎಂ ವಿದ್ಯಾರ್ಥಿಗಳ ತಂಡ ಥ್ರೋಬಾಲ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ, ವಾಲಿಬಾಲ್ ತೃತೀಯ ಸ್ಥಾನ, ರಿಲೇ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ, ಅಥ್ಲೆಟಿಕ್ಸ್ ವೈಯುಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ವಿಜೇತರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲೆಯ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
Also read: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕಾಗಿದೆ: ಶಾಸಕ ಬಂಡೆಪ್ಪ ಖಾಶೆಂಪುರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post