ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋಪಿ ಶೆಟ್ವಿಕೊಪ್ಪ ಹಾಗೂ ಗೋವಿಂದಪುರದ ಆಶ್ರಯ ಮನೆ ಹಂಚಿಕೆಯಲ್ಲಿ ಸಂಪೂರ್ಣ ಅಕ್ರಮವಾಗಿದ್ದು, ಇದನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಶಿವಮೊಗ್ಗ ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿ ಮಾಜಿ ಸದಸ್ಯ ಎಸ್. ತಂಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯನವರು 2017 ರಂದು ಮುಖ್ಯಮಂತ್ರಿ ಆಗಿದ್ದಾಗ ಅರ್ಜಿಯನ್ನು ಕರೆಯಲಾಗಿತ್ತು. 2017-18ರಲ್ಲಿ ಮೊದಲ ಬಾರಿಗೆ ಅರ್ಜಿಯನ್ನು ಹಾಕಿರುವ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಹಂಚಬೇಕಾಗಿತ್ತು. ಆದರೆ ಕಳೆದ ಬಿಜೆಪಿ ಸರ್ಕಾರವು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ತಮಗೆ ಬೇಕಾದವರನ್ನು ಗುರುತಿಸಿ ಮನೆಗಳನ್ನು ಹಂಚಿರುತ್ತಾರೆ ಎಂದು ದೂರಿದ್ದಾರೆ.
ಅಂದಿನ ಪ್ರಕ್ರಿಯೆ ಸಂಪೂರ್ಣ ಅಕ್ರಮವಾಗಿದ್ದು ಮೊದಲ ಬಾರಿಗೆ ಅರ್ಜಿ ಹಾಕಿದ್ದ ಫಲಾನುಭವಿಗಳಿಗೆ ಈ ಕೂಡಲೇ ಜಿಲ್ಲಾ ಮಂತ್ರಿಗಳು ಮನೆಗಳನ್ನು ಹಸ್ತಾಂತರಿಸಿ ಬಡವರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ. ಈ ಬಗ್ಗೆ ಗಮನಹರಿಸಿ ಸೂಕ್ತ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
2018 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಮೊದಲು ಆದ್ಯತೆಯನ್ನು ನೀಡಿ ಮನೆಗಳನ್ನು ಹಸ್ತಾಂತರಿಸಬೇಕು, ಅಕ್ರಮವಾಗಿ ಕಾನೂನು ಬಾಹಿರವಾಗಿ ಹಂಚಿರುವ ಮನೆಗಳನ್ನು ವಾಪಸ್ ಪಡೆದು ಆದ್ಯತೆಯ ಮೇರೆಗೆ ಮನೆಗಳನ್ನು ಹಸ್ತಾಂತರಿಸಬೇಕು. ಈ ವಿಚಾರವಾಗಿ ಕಳೆದ ತಿಂಗಳು ವಸತಿ ಸಚಿವರನ್ನು ಸಹ ಭೇಟಿ ಮಾಡಿ ಆಗಿರುವ ಗೊಂದಲಗಳನ್ನು ವಿವರಿಸಲಾಗಿದೆ. ಅವರು ಯಾವುದೇ ರೀತಿ ಅನ್ಯಾಯವಾಗದ ರೀತಿ ಮನೆಗಳನ್ನು ಹಂಚಲಾಗುವುದು ನ್ಯಾಯತವಾಗಿ ಎಂದು ತಿಳಿಸಿದ್ದಾರೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು, ಮೂಲ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು. ಮೊದಲು ನಿಗದಿಪಡಿಸಿದ ಹಣವನ್ನು ಪಾವತಿ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post