ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲಾ ಘಟಕವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಸಹಕಾರದಲ್ಲಿ ವಿಶೇಷ ದತ್ತಿ ಉಪನ್ಯಾಸ ಆಯೋಜಿಸಿದೆ.
ಫೆ.5ರಂದು ಭಾನುವಾರ ಸಂಜೆ 6 ಗಂಟೆಗೆ ಸರ್ಕಾರಿ ನೌಕರರ ಭವನ ಸಭಾಂಗಣದಲ್ಲಿ ಈ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರು ಮಾತೃಶಕ್ತಿ, ರಾಷ್ಟ್ರಭಕ್ತಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಹಾರ್ನಹಳ್ಳಿ ಜವಳಿ ನಾಗೇಶ್ವರಪ್ಪ ಪಾರ್ವತಮ್ಮ ಅವರ ಹೆಸರಿನಲ್ಲಿ ಕವಿತಾ ಜೆ.ಎನ್, ಓಂಕಾರಪ್ಪ ಮತ್ತು ಮಕ್ಕಳು ಈ ದತ್ತಿ ನೀಡಿದ್ದಾರೆ. ಡಾ. ಶ್ರೀ ಬಸವ ಮರುಳಸಿದ್ಧ ಮಹಾಸ್ವಾಮಿಗಳು, ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗ ಇವರು ಸಾನ್ನಿಧ್ಯವಹಿಸಲಿದ್ದು, ಹೆಚ್.ಎನ್. ಮಹಾರುದ್ರ, ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
Also read: ಗಮನಿಸಿ! ಫೆ.6ರಂದು ಮಾಚೇನಹಳ್ಳಿ ಸುತ್ತಮುತ್ತಲಿನ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್. ರುದ್ರೇಗೌಡರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಆಗಮಿಸಲಿದ್ದಾರೆ.
ಅಂಧ ಕಲಾವಿದರಿಂದ ವಚನ ಗಾಯನ:
ನವಜ್ಯೋತಿ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯ ಎನ್ ಜೆ ಮೆಲೋಡಿಸ್ ನ ಬಸವರಾಜು ಹಾಗೂ ತಂಡದವರಿಂದ ವಚನ ಗಾಯನ ನಡೆಯಲಿದೆ.ದತ್ತಿದಾನಿಗಳಾದ ಉದ್ಯಮಿ ಜೆ. ಎನ್. ಓಂಕಾರಪ್ಪ ಜವಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post