ಶಿವಮೊಗ್ಗ ತುಂಗಾ ಭದ್ರ ಸಕ್ಕರೆ ಕಾರ್ಖಾನೆಯ ಜಮೀನನ್ನು ರೈತರು ಉಳುಮೆ ಮಾಡಿಕೊಂಡು ಬಂದಿದ್ದು, ಈಗ ಮಾಲೀಕರು ಅದನ್ನು ಹೈಕೋರ್ಟ್ ಆದೇಶದಂತೆ ವಶಪಡಿಸಿಕೊಳ್ಳುತ್ತಾರೆ ಎಂಬ ಆತಂಕದಲ್ಲಿ ರೈತರು ಇರುವುದು ಮತ್ತು ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಸರ್ಕಾರ ರೈತರ ಪರವಾಗಿದೆ ಎಂದು ಸಚಿವ ಮಧು ಬಂಗಾರಪ್ಪ Minister Madhu Bangarappa ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ತೊಡಕುಗಳನ್ನು ಗಮನಿಸಿ ಕಾನೂನು ತಜ್ಞರೊಂದಿಗೆ ಸಂಪರ್ಕಿಸಿ ಸರ್ಕಾರ ಮುಂದಿನ ನಡೆ ಇಡುತ್ತದೆ. ನೆನ್ನೆಯಷ್ಟೇ ನನ್ನ ಗಮನಕ್ಕೆ ಬಂದಿದೆ. ಹೋರಾಟಗಾರರು ಹಾಗೂ ಅವರ ವಕೀಲರೊಂದಿಗೆ ನೆನ್ನೆ ಸಭೆ ನಡೆಸಿದ್ದೇನೆ. ಲ್ಯಾಂಡ್ ಮಾಫೀಯಾದ ಕೈವಾಡವಿದೆ ಎಂಬ ಆರೋಪವಿದೆ. ರೈತರು ಕಳೆದ 30-35 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಜಮೀನು ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಸರ್ಕಾರ ಸಿದ್ದವಿದೆ ಎಂದರು.
ಕೋವಿಡ್ Covid ಸಂಬಂಧಪಟ್ಟಂಗೆ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸಧ್ಯಕ್ಕೆ ಇಲ್ಲ. ಜನರ ಸಹಕಾರ ಅತಿ ಮುಖ್ಯ. ಸರ್ಕಾರದ ಗೈಡ್‍ಲೈನ್ಸ್ ಪ್ರಕಾರ ಎಲ್ಲಾ ನಾಗರೀಕರು ಅನುಸರಿಸಬೇಕಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು, ಮಾಸ್ಕ್ ಧರಿಸಬೇಕು, ಸರ್ಕಾರ ಏನು ಮಾಡಿದರು ಜನರ ವಿವೇಚನೆ ಅತಿ ಮುಖ್ಯ, ಜನರು ಜಾಗೃತಿಗೊಳ್ಳಬೇಕು ಎಂದರು.
ಸಂಸದ ಪ್ರತಾಪ್ ಸಿಂಹ MPPrathapSimha ಜನರ ಘನತೆ ಗೌರವ ತೆಗೆಯುತ್ತಿದ್ದಾರೆ, ಪ್ರತಾಪ್ ಸಿಂಹ ಏನು ಅಂತ ಅವರೇ ಹೇಳಿಕೊಂಡಿದ್ದಾರೆ. ಸೋಮಾರಿಗಳು ತಾನೇ ಇಂತಹ ಮಾತುಗಳನ್ನ ಹೇಳೋದು. ಬದ್ದಿವಂತರು ಇಂತಹ ಹೇಳಿಕೆ ಕೊಟ್ತಾರಾ ?. ಮಾಧ್ಯಮದಲ್ಲಿ ಮಾತಾಡೋದನ್ನ ಬಿಟ್ಟು ಏನ್ ಸಾಹಸ ಮಾಡಿದ್ದಾರೆ. ನಾನು ಬರಹಗಾರ, ನಾನು ಬರಹಗಾರ ಅನ್ನೊದನ್ನ ಬಿಟ್ಟು. ಮತ ಹಾಕಿರುವವರರ ಘನತೆ ಕಾಪಾಡಿಕೊಳ್ಳಲಿ ಎಂದರು.
ಬಿಜೆಪಿ ಅಧಿಕಾರದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೇನೆ ಕೂಡ ನಾವು ವಿರೋಧ ಪಕ್ಷದಲ್ಲಿದಾಗ ಹೇಳುತ್ತಿದ್ದೇವು. ಅದನ್ನು ಯತ್ನಾಳ್ ಈಗ ಸತ್ಯವನ್ನು ನುಡಿದಿದ್ದಾರೆ. ಮುಂದೆ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಸರ್ಕಾರದ ಹಣ ಆ ರೀತಿಯ ದುರ್ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ಯತ್ನಾಳ್ ಅವರಿಗೆ ಆ ಭಾವನೆ ಇದ್ದರೆ ಸರ್ಕಾರ ಗಮನಕ್ಕೆ ತಗೆದುಕೊಂಡು ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದರು.
ಸಂಸದ ಬಿ.ವೈ. ರಾಘವೇಂದ್ರ MPRaghavendra ಅವರು ಸಕ್ಕರೆ ಕಾರ್ಖಾನೆ ಜಮೀನು ಹೋರಾಟಗಾರರ ನೇತೃತ್ವವನ್ನು ವಹಿಸಿ ನನ್ನ ಮೇಲೆ ಅನಾವಶ್ಯಕ ಆರೋಪ ಮಾಡಿದ್ದಾರೆ. ಹೆಗಲ ಮೇಲೆ ಇಷ್ಟು ವರ್ಷ ಹೊತ್ತುಕೊಂಡು ಈಗ ಬೇರೆಯವರ ಹೆಗಲ ಮೇಲೆ ಹಾಕುತ್ತಿದ್ದಾರೆ. ಸಂಸದ ರಾಘವೇಂದ್ರ ಮಾತನಾಡುವಾಗ ಹುಷಾರ್ ಆಗಿ ಮಾತಾಡಬೇಕು. ಅವರ ಕುಮ್ಮಕಿದೇ ಇವರ ಕುಮ್ಮಕಿದೆ ಅನ್ನುತ್ತಾರೆ. ಅವರ ಪಂಚಾಯಿತಿ ಬಿಡಿಸಿ ಬಿಡುತ್ತೇನೆ. ನಾನು ಈಗ ಶುರು ಮಾಡುತ್ತೇನೆ ಇದಲ್ಲ ಬೇರೆಯದು ಬೇಕಾದಷ್ಟು ಇದೆ. ಅವುಗಳನ್ನು ತೆಗೆಯುತ್ತೇನೆ ಈಗ. ಒಂದು ಸಲನಾದ್ರೂ ಇವರ ಹಣೆಬರಕ್ಕೆ ಪಾದಯಾತ್ರೆ ಮಾಡಿ ಯಾರಿಗಾದರೂ ನ್ಯಾಯ ಕೊಡಿಸಿದ್ದಾರಾ? ಜನರನ್ನು ಇಟ್ಟುಕೊಂಡು ಕುಮ್ಮಕ್ಕು ಕೊಡೊದು. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡುವ ಯೋಗ್ಯತೆ ಇವರಿಗಿಲ್ಲ. ಈಗ ಪುಕ್ಸಟ್ಟೆ ಭಾಷಣ ಮಾಡುತ್ತಾರೆ. ಅವರದೇ ಪಕ್ಷ ಅಧಿಕಾರದಲ್ಲಿತ್ತು, ಅವರ ತಂದೆಯೇ ಮುಖ್ಯಮಂತ್ರಿಗಳಾಗಿದ್ದರು, ಹಾಗ ಅವರಿಗೆ ಹಕ್ಕುಪತ್ರದ ನೆನಪಾಗಲಿಲ್ಲವೆ. ಪುಣ್ಯಾತ್ಮ ಸಂಸತ್‍ನಲ್ಲಿ ಬಾಯಿ ಬಿಟ್ಟಿಲ್ಲ, ಪುಕ್ಸಟ್ಟೆ ಮಾತಾಡೋಕೆ ನಾವೇನು ಪುಕ್ಸಟ್ಟೆ ಸಿಗ್ತೇವಾ. ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post