ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಮಾರಿಕಾಂಬಾ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಇಂದು ಸಾಂಪ್ರದಾಯಿಕವಾಗಿ ಸಾರ ಹಾಕಲಾಗಿದ್ದು, ಅಧಿಕೃತವಾಗಿ ಸಾರ್ವಜನಿಕರಿಗೆ ಆಮಂತ್ರಣ ನೀಡಲಾಗಿದೆ.
ಸಾರು ಹಾಕುವ ಮೂಲಕ ಜಾತ್ರೆ ಇಂದು ವಿದ್ಯುಕ್ತವಾಗಿ ಆರಂಭಗೊಂಡಿದೆ. ಊರಿನ ವ್ಯಾಪ್ತಿಯಲ್ಲಿ ಸಾರು ಹಾಕಲಾಗಿದ್ದು, ಊರಿನವರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಅಲ್ಲದೇ, ಸಾರು ಹಾಕಿದ ನಂತರ ಊರಿನ ನಿವಾಸಿಗಳು ಹೊರ ಊರಿಗೆ ಹೋಗುವಂತಿಲ್ಲ, ಹೋದರೂ ರಾತ್ರಿಯೊಳಗೆ ಹಿಂತಿರುಗಬೇಕು ಎಂದು ಸಂಪ್ರದಾಯವಿದೆ.
Also read: ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಅಡುಗೆ ಎಣ್ಣೆ ಮಾರಾಟ: ಕಠಿಣ ಕ್ರಮಕ್ಕೆ ಆಗ್ರಹ
ಜಾತ್ರೆಗೆ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸರಳ ಜಾತ್ರೆ ಎಂದೇ ತೀರ್ಮಾನಿಸಲಾಗಿದ್ದರೂ, ಧಾರ್ಮಿಕ ವಿಧಿವಿಧಾನಗಳಲ್ಲಿ ಯಾವುದೇ ಚ್ಯುತಿ ಬಾರದಂತೆ ಸಂಪ್ರದಾಯ, ಪದ್ಧತಿಗಳ ಆಧರಿಸಿ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post