ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಣಂದೂರು ಮೂಲದ ವ್ಯಕ್ತಿಯೊಬ್ಬರ ಗೂಡ್ಸ್ ವಾಹನದ ಡ್ಯಾಷ್ ಬೋರ್ಡ್’ನಲ್ಲಿರಿಸಿದ್ದ 1.5 ಲಕ್ಷ ರೂ. ನಗದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
ಕೋಣಂದೂರಿನ ತಿಮ್ಮಪ್ಪ ಎನ್ನುವವರು ತಮ್ಮ ಅಂಗಡಿಗೆ ವಸ್ತುಗಳನ್ನು ತರಲು ಗೂಡ್ಸ್ ವಾಹನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ವಿಆರ್’ಎಲ್ ಟ್ರಾನ್ಸ್’ಪೋರ್ಟ್ ಕಚೇರಿ ಬಳಿಯಲ್ಲಿ ವಾಹನ ನಿಲ್ಲಿಸಿ ಪಾರ್ಸಲ್ ತರಲು ಹೋಗಿದ್ದರು. ಈ ವೇಳೆ ತಿಮ್ಮಪ್ಪನವರಿಗೆ ಪರಿಚಯವೇ ಇದ್ದ ನರಸಿಂಹಮೂರ್ತಿ ಎಂಬ ವ್ಯಕ್ತಿ ವಾಹನದ ಡ್ಯಾಷ್ ಬೋರ್ಡ್’ನಲ್ಲಿ ಇಟ್ಟಿದ್ದ 1,50,000 ರೂ. ಹಣವನ್ನು ಕಳ್ಳತನ ಮಾಡಿದ್ದರು.
Also read: ಶಿವಮೊಗ್ಗ | ಪೊಲೀಸರು ಬೆನ್ನು ಹತ್ತಿದ್ದು 1 ಪ್ರಕರಣ, ಪತ್ತೆಯಾಗಿದ್ದು 7 ಕಳ್ಳತನ ಕೇಸ್ | ಭದ್ರಾವತಿಯ 5 ಮಂದಿ ಅಂದರ್

ಎಸ್’ಪಿ ಮಿಥುನ್ ಕುಮಾರ್, ಎಎಸ್’ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ. ಕಾರಿಯಪ್ಪ, ಅವರುಗಳು ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಬಾಬು ಆಂಜಿನಪ್ಪ, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ರವಿ ಪಾಟೀಲ್, ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಎಎಸ್’ಐ ನಾಗರಾಜ್, ಎಚ್’ಸಿ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ, ಸಿಪಿಸಿಗಳಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ ರಾವ್, ಪ್ರಕಾಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post