ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಎಸ್’ಟಿಯಿಂದ ದೇಶದ ಆರ್ಥಿಕ ಅಭಿವೃದ್ಧಿಯಾಗಿದ್ದು, ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುಂದುವರೆಯುತ್ತಿದ್ದು, ವಿಶ್ವದ ಅನೇಕ ದೇಶಗಳ ಕೈಗಾರಿಕೆಗಳು ಭಾರತದತ್ತ ಮುಖ ಮಾಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y Vijayendra ಹೇಳಿದ್ದಾರೆ.
ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಎಸ್’ಟಿ ಕೌನ್ಸಿಲ್ ಹಾಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿಗಳ ಆಶಯದಂತೆ ದೇಶದ ಜನರಿಗೆ ಜಿಎಸ್’ಟಿ 2.0ನಲ್ಲಿ ಐತಿಹಾಸಿಕ ಸುಧಾರಣೆಗಳನ್ನು ತಂದಿದ್ದು, ದೇಶದ ಜನತೆಗೆ ದಿನಬಳಕೆ ವಸ್ತುಗಳ ದರ ಇಳಿಕೆಗೆ ಕಾರಣರಾದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧಿ ಬಜಾರ್ ನ ವ್ಯಾಪಾರಸ್ಥರಿಗೆ ಸಿಹಿ ತಿನ್ನಿಸಿ ಜಿಎಸ್’ಟಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಕಸಿತ ಭಾರತದ ಕನಸು ನನಸಾಗಲು ಜಿಎಸ್’ಟಿ ಬೆಂಬಲ ನೀಡಿದೆ. ಇಂದಿನಿAದ ಜಿಎಸ್’ಟಿ ಐತಿಹಾಸಿಕವಾಗಿ ಜಾರಿಯಾಗಿದೆ. ಇದಕ್ಕಾಗಿ ಜಿಲ್ಲೆಯ ಕಾರ್ಯಕರ್ತರು, ಮುಖಂಡರು, ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದರಲ್ಲದೇ ಜನರಿಗೂ ಕೂಡ ಜಿಎಸ್’ಟಿ ಸುಧಾರಣೆಯ ಬಗ್ಗೆ ತಿಳಿಸುತ್ತಿದ್ದೇವೆ. ಇವತ್ತಿನಿಂದಲೇ ಕೆಲವು ಗೊಂದಲಗಳು ಕೂಡ ಸರಿಯಾಗಲಿವೆ ಎಂದರು.

ಹಿಂದೂಗಳ ಹಬ್ಬ ಹರಿದಿನ ಮಾಡಲು ದೇಶದ ಯಾವ ರಾಜ್ಯದಲ್ಲೂ ಗೊಂದಲವಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಈ ಗೊಂದಲ. ಇದಕ್ಕೆ ಸಿಎಂ ಅವರೇ ಕಾರಣ ಎಂದ ಅವರು ದಸರಾ ಉದ್ಘಾಟನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಏನಾಗಿದೆ ಎನ್ನುವುದು ಮುಖ್ಯವಲ್ಲ ಸಿಎಂ ಹುಚ್ಚಾಟ ಆಡಿದರು ಅಷ್ಟೇ. ದಸರಾ ಉದ್ಘಾಟನೆ ಯಾರಾದರೂ ಮಾಡಲಿ ಎಂದರು.

ಶಿವಪ್ಪನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಗಾಂಧಿ ಬಜಾರ್ ವರ್ತಕರಿಗೆ ಜಿಎಸ್’ಟಿ ಬಗ್ಗೆ ಮಾಹಿತಿ ನೀಡಿ ಪ್ರಧಾನಿ ಮೋದಿ #PM Modi ಪರ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮೋಹನ್ ರೆಡ್ಡಿ, ಮಂಜುನಾಥ್, ಮಾಲತೇಶ್, ಸುರೇಖಾ ಮುರಳೀಧರ್, ಮಂಗಳಾ ನಾಗೇಂದ್ರ, ಸುಮಿತ್ರಾ, ಚೈತ್ರಾ ಪೈ, ಶಿವಾನಂದ್, ಹರಿಕೃಷ್ಣ, ಶಿಲ್ಪಾ ಶ್ರೀನಿವಾಸ್, ಸುಮಾ ಭೂಪಾಳಂ, ವಿಶ್ವನಾಥ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















Discussion about this post