ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿ ಶಿವಮೊಗ್ಗದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತವಾಗಿ ಸಾಮಾಜಿಕ ಭದ್ರತೆಯ ಯೋಜನೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಯಿತು.
ಚಿಕ್ಕಮಂಗಳೂರು ಜಿಲ್ಲೆಯ ಸಕ್ಕರೆ ಪಟ್ಟಣದ ಸರ್ಕಾರಿ ಶಾಲೆಗೆ, ಸಾಗರ ತಾಲೂಕು ಇಂಗಿನಬೈಲಿನ ಚೆನ್ನಮ್ಮಾಜಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಚ್ಛ ಗೃಹವನ್ನು ನಿರ್ಮಾಣ ಮಾಡಿಸಿಕೊಡಲಾಯಿತು ಹಾಗೂ ಶಿವಮೊಗ್ಗ ನಗರದಲ್ಲಿರುವ ಜೀವನ ಸಂಜೆ ವೃದ್ದಾಶ್ರಮಕ್ಕೆ ಶುದ್ಧ ನೀರಿನ ಘಟಕ ಚೇರ್ ಮತ್ತು ಚಿತ್ರದುರ್ಗ ಜಿಲ್ಲೆಯ ಎಂ. ಕೆ. ಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾ ಸಂಸ್ಥೆಗೆ ಚೇರ್ ಹಾಗೂ ಹಾಸಿಗೆ ನೀಡಲಾಯಿತು.

Also read: ಶ್ವಾನ ಪ್ರದರ್ಶನ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಂದ ಭೀಮ: ಶುನಕದ ಬೆಲೆ ಕೇಳಿ ಹೌಹಾರಿದ ಜನತೆ



















Discussion about this post