ಕಲ್ಪ ಮೀಡಿಯಾ ಹೌಸ್ | ಸೊರಬ |
ಹಿಂದೂ ಕಾರ್ಯತರ್ಕ ಹರ್ಷನ ಹತ್ಯೆ #Hindu activist Harsha murder ವಿರೋಧಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಫೆ.23ರ ನಾಳೆ ಸೊರಬ ಪಟ್ಟಣ ಬಂದ್’ಗೆ ಕರೆ ನೀಡಲಾಗಿದೆ.
ವಿಶ್ವ ಹಿಂದೂ ಪರಿಷತ್ ವತಿಯಿಂದ ನಾಳೆ ಸೊರಬ ಪಟ್ಟಣ ಬಂದ್’ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಬೆಂಬಲ ನೀಡುವಂತೆ ಕೋರಲಾಗಿದೆ.
Also read: ಹತ್ಯೆ ಪ್ರಕರಣ-ಕ್ರಿಮಿನಲ್ ಹಿನ್ನೆಲೆಯ ಆರು ಮಂದಿ ಬಂಧನ: ಎಸ್’ಪಿ ಲಕ್ಷ್ಮೀ ಪ್ರಸಾದ್ ಮಾಹಿತಿ
ಈ ಕುರಿತಂತೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಮುಖರು, ಹರ್ಷನ ಹತ್ಯೆ ಸಂಬಂಧಿಸಿದ ಎಲ್ಲ ಕೊಲೆಗಾರರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ, ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕಾಗಿ ಆಗ್ರಹ ವ್ಯಕ್ತಪಡಿಸಲು ನಾಳೆ ಸೊರಬ ಪಟ್ಟಣ ಬಂದ್’ಗೆ ಕರೆ ನೀಡಲಾಗಿದ್ದು, ಎಲ್ಲರೂ ಸಹಕರಿಸಬೇಕು. ಬಂದ್ ಮಾಡುವಂತೆ ಯಾರನ್ನೂ ನಾವೂ ಬಲವಂತ ಮಾಡುವುದಿಲ್ಲ. ಬದಲಾಗಿ ಹಿಂದೂ ಕಾರ್ಯಕರ್ತನ ಹತ್ಯೆಗೆ ನ್ಯಾಯ ಒದಗಿಸಲು ಸಹಕಾರ ನೀಡಿ ಎಂದು ವಿನಂತಿಸುತ್ತೇವೆ ಎಂದಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post