ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ ಇಲ್ಲಿನ ರೇಡಿಯಾಲಜಿ ವಿಭಾಗಕ್ಕೆ ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಆಸ್ತಕ ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ: 29.02.2024 ರೊಳಗೆ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ರೂ.2500/- ಇರುತ್ತದೆ. ಸಂದರ್ಶನವು ಫೆ.29ರ ಬೆಳಗ್ಗೆ 11 ಗಂಟೆಗೆ, ಸಿಮ್ಸ್ ಸಂಸ್ಥೆಯ ನಿರ್ದೇಶಕರ ಸಭಾ ಕೊಠಡಿ ಶಿವಮೊಗ್ಗ ಇಲ್ಲಿ ನಡೆಯಲಿದೆ.
Also read: ಗಮನಿಸಿ! ಫೆ.22ರ ನಾಳೆ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಹೆಚ್ಚಿನ ಮಾಹಿತಿ, ಮೂಲ ಅಧಿಸೂಚನೆ ಅರ್ಹತೆ ಮತ್ತು ಅರ್ಜಿ ನಮೂನೆ ಕುರಿತಂತೆ ಸಂಸ್ಥೆಯ ವೆಬ್’ಸೈಟ್’ಗೆ ವಿಸಿಟ್ ಮಾಡಬಹುದಾಗಿದೆ. ಅಥವಾ ಸಂಸ್ಥೆಯ ಸೂಚನಾ ಪಲಕ ನೋಡಬಹುದೆಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post