ಕಲ್ಪ ಮೀಡಿಯಾ ಹೌಸ್ | |
ನಗರದ ಎನ್.ಟಿರಸ್ತೆಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆ ಹಾಗೂ ಶ್ರೀ ಸ್ಥಾನಕ್ ವಾಸಿಜೈನ್ ನವಯುವಕ ಮಂಡಳಿ ಇವರುಗಳ ಸಹಯೋಗದಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಬಿ.ಬಿರಸ್ತೆಯಲ್ಲಿರುವ ಮಹಾವೀರ ಜೈನ್ ಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಜನವರಿ 7ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 1.30ರವರೆಗೆ ಆರೋಗ್ಯ ತಪಾಸಣಾ ಶಿಬಿರವು ಜರುಗಲಿದೆ.
ಶಿಬಿರದಲ್ಲಿ ಡಾ. ನಾರಾಯಣ ಪಂಜಿ (ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು), ಡಾ.ಶಿವಕುಮಾರ್ (ನೇತ್ರಶಸ್ತ್ರ ಚಿಕಿತ್ಸಾತಜ್ಞರು), ಡಾ.ಚಂದ್ರಶೇಖರ್ (ಯೂರಲಾ ಜಿಸ್ಟ್), ಡಾ.ಲೋಹಿತ್ (ಇ.ಎನ್. ಶಸ್ತ್ರಚಿಕಿತ್ಸಾ ತಜ್ಞರು), ಡಾ.ಅಭಿಲಾಶ್.ಕೆ.ಎನ್ (ಫಿಜಿಷಿಯನ್), ಡಾ.ಸುಜಿತ್ (ಶ್ವಾಸಕೋಶತಜ್ಞರು), ಡಾ. ರಾಘವೇಂದ್ರ ವೈಲಾಯ (ಮಕ್ಕಳ ತಜ್ಞರು), ಡಾ.ಶುಭ ವೈರಾಯ (ಹೆರಿಗೆ ಮತ್ತು ಸ್ತ್ರೀ ರೋಗತಜ್ಞರು), ಡಾ.ಭವ್ಯ ರಾವ್ (ಹೆರಿಗೆ ಮತ್ತು ಸ್ತ್ರೀರೋಗತಜ್ಞರು), ಡಾ. ಸುಮಯ್ಯತಬಸ್ಸುಮ್ (ಹೆರಿಗೆ ಮತ್ತು ಸ್ತ್ರೀ ರೋಗತಜ್ಞರು) ಇನ್ನೂ ಅನೇಕ ನುರಿತತಜ್ಞ ವೈದ್ಯರತಂಡ ಭಾಗವಹಿಸಲಿದೆ.
ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರಿತೇಶ್ ಬೋರಾ 9886299199, ಪ್ರವೀಣ್, ವಿನಯ-9845353911ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post