ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರಿದ್ರ ಮಳೆಯ ಅಬ್ಬರ ಜೋರಾಗಿದ್ದು, ಮಲೆನಾಡು ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ, ಗಾಜನೂರಿನ ತುಂಗಾ ಆಣೆಗಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯಕ್ಕೆ 17,910 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, 17,910 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಪರಿಣಾಮವಾಗಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಪುರಾತನ ಪ್ರಸಿದ್ಧ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪ ಮುಳುಗಲು ಇನ್ನು ಕೆಲವೇ ಅಡಿಗಳನ್ನು ಮಾತ್ರ ಬಾಕಿ ಇದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 288.8 ಮಿಮಿ ಮಳೆಯಾಗಿದ್ದು, ಸರಾಸರಿ 41 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 98.00 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 21.70 ಮಿಮಿ., ಭದ್ರಾವತಿ 13.70 ಮಿಮಿ., ತೀರ್ಥಹಳ್ಳಿ 48.90 ಮಿಮಿ., ಸಾಗರ 85.60 ಮಿಮಿ., ಶಿಕಾರಿಪುರ 19.40 ಮಿಮಿ., ಸೊರಬ 35.20 ಮಿಮಿ. ಹಾಗೂ ಹೊಸನಗರ 64.30 ಮಿಮಿ. ಮಳೆಯಾಗಿದೆ.
Also read: ಕನ್ನಡ ನವೋದಯ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವರು ಬಿಎಂಶ್ರೀ: ನರಹಳ್ಳಿ ಬಾಲಸುಬ್ರಮಣ್ಯ
ಯಾವ ಜಲಾಶಯದಲ್ಲಿ ಎಷ್ಟು ನೀರು?
ಲಿಂಗನಮಕ್ಕಿ: 1819 (ಗರಿಷ್ಠ), 1757.70 (ಇಂದಿನ ಮಟ್ಟ), 16729.00 (ಒಳಹರಿವು), 2260.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.90.
ಭದ್ರಾ: 186 (ಗರಿಷ್ಠ), 155.20 (ಇಂದಿನ ಮಟ್ಟ), 13405.00 (ಒಳಹರಿವು), 130.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 155.20.
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 17910.00 (ಒಳಹರಿವು), 17910.00 (ಹೊರಹರಿವು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















