ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಂಚಾರ ವೃತ್ತದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸಿಟಿ ಬಸ್‍ಸ್ಟ್ಯಾಂಡ್‍ಗಳ ಕುರಿತು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಕೆಳಕಂಡಂತೆ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚಿತ ಬಸ್‍ಸ್ಟ್ಯಾಂಡ್‍ಗಳಲ್ಲಿ ಮಾತ್ರ ಸಿಟಿ ಬಸ್ ನಿಲ್ಲಿಸಲು ಆದೇಶಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಪ್ರತಿ ದಿನ 61 ಸಿಟಿ ಬಸ್‍ಗಳು ಸಂಚರಿಸುತ್ತಿದ್ದು ಎಲ್ಲಾ ಸಿಟಿ ಬಸ್ ಚಾಲಕರು ಜಿಲ್ಲಾಡಳಿತದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ನಿಲ್ಲಿಸದೇ ಪ್ರಯಾಣಿಕರು ಕೈ ತೋರಿಸಿದ ಕಡೆಯಲ್ಲೆಲ್ಲ ರಸ್ತೆ ಮಧ್ಯದಲ್ಲೇ ಬಸ್‍ಗಳನ್ನು ನಿಲುಗಡೆ ಮಾಡುತ್ತಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಅವರ ಹಿಂದೆ ಬರುವ ವಾಹನಗಳು ಮುಂದೆ ಅಥವಾ ಹಿಂದೆ ಹೋಗಲು ಆಗದೇ ಅವರು ಅಲ್ಲಿಂದ ಹೊರಡುವವರೆಗೆ ಕಾಯುವ ಸ್ಥಿತಿ ಇದ್ದು ಇದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿತ್ತಿದೆ. ಆದ್ದರಿಂದ ಕೆಳಕಂಡ ಅಧಿಸೂಚಿತ ಸಿಟಿ ಬಸ್‍ಗಳಲ್ಲಿ ಮಾತ್ರ ಬಸ್‍ಗಳನ್ನು ನಿಲುಗಡೆ ಮಾಡಬೇಕೆಂದು ಆದೇಶಿಸಲಾಗಿದೆ.
ಅಧಿಸೂಚಿತ ಬಸ್‍ಸ್ಟ್ಯಾಂಡ್‍ಗಳ ವಿವರ :
ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಹೆಚ್ ರಸ್ತೆಯ ಶಿವಪ್ಪನಾಯಕ ವೃತ್ತದ ಬಸ್ ಸ್ಟ್ಯಾಂಡ್, ಸರ್ಕಾರಿ ಮೈನ್ ಮಿಡ್ಲ್ ಸ್ಕೂಲ್ ಎದುರು, ಕರ್ನಾಟಕ ಸಂಘ ಬಸ್ಟಾಪ್, ಡಿಡಿಪಿಐ ಕಚೇರಿ ದ್ವಾರದ ಬಳಿ, ಕೃಷ್ಣ ಕೆಫೆ ಹೋಟೆಲ್ ಎದುರು, ಮೀನಾಕ್ಷಿ ಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು, ತುಂಗಾ ಹೊಳೆ ಬಸ್ಟಾಪ್, ಹೊಳೆಹೊನ್ನೂರು ಕ್ರಾಸ್ ಎನ್‍ಸಿಸಿ ಆಫೀಸ್ ಹತ್ತಿರ, ಮಹಾದೇವಿ ಟಾಕೀಸ್, ವಿದ್ಯಾನಗರ ಗಣೇಶ್ ಭವನ, ಗಣಪತಿ ದೇವಸ್ಥಾನ ಬಲಭಾಗ ವಿದ್ಯಾನಗರ, ಸಹ್ಯಾದ್ರಿ ಕಾಲೇಜ್ ಹತ್ತಿರ ವಿದ್ಯಾನಗರ, ದೂರದರ್ಶನ ಕೇಂದ್ರದ ಬಳಿ, ಎಂಆರ್‍ಎಸ್ ಸರ್ಕಲ್ ಎಡಭಾಗ, ಎಂಆರ್‍ಎಸ್ ಸರ್ಕಲ್ ಬಲಭಾಗ, ಹರಿಗೆ, ಹಾಥಿನಗರ ಕ್ರಾಸ್, ಶುಗರ್ ಫ್ಯಾಕ್ಟರಿ, ಮಲವಗೊಪ್ಪ ಚನ್ನಬಸವೇಶ್ವರದ ದೇವಸ್ಥಾನದ ಹತ್ತಿರ, ಕಾಡಾ ಆಫೀಸ್ ಎದುರು.
ಹೊಳೆಹೊನ್ನೂರು ರಸ್ತೆಯ ಸಿದ್ದೇಶ್ವರ ನಗರ 2ನೇ ಕ್ರಾಸ್, ಕೆನರಾ ಬ್ಯಾಂಕ್ ಎದುರು, ಗುರುಪುರ, ಸುಬ್ಬಯ್ಯ ಮೆಡಿಕಲ್ ಕಾಲೇಜ್. ಎನ್‍ಆರ್ ಪುರ ರಸ್ತೆಯಲ್ಲಿ ಜ್ಯೋತಿ ನಗರ, ವಡ್ಡಿನಕೊಪ್ಪ, ಮುಖ್ಯ ಅಂಚೆ ಕಚೇರಿ ಎದುರು, ತಾನಿಷ್ಕ ಜ್ಯೂವೆಲರ್ಸ್ ಎದುರು, ತಾಲ್ಲೂಕು ಕಚೇರಿ ಎದುರು. ಬಾಲರಾಜ್ ಅರಸ್ ರಸ್ತೆಯಲ್ಲಿ ಕೆಇಬಿ ಸರ್ಕಲ್, ಮುಖ್ಯ ರೈಲ್ವೇ ನಿಲ್ದಾಣ. ಹೊನ್ನಾಳಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್, ಶೃತಿ ಶೋ ರೂಂ ಎದುರು ಹೊನ್ನಾಳಿ ರಸ್ತೆ(ಶಾಂತಿನಗರ), ನಾಗಪ್ಪ ರ್ಸಲ್ ಶಾಂತಿನಗರ, ಪೇಸ್ ಕಾಲೇಜ್ ಎದುರು, ತ್ಯಾವರೆ ಚಟ್ನಳ್ಳಿ.
ಸವಳಂಗ ರಸ್ತೆಯ ಈದ್ಗಾ ಮೈದಾನದ ಎದುರು(ಡಿಸಿ ಕಚೇರಿ ಎದುರು), ಜಯನಗರ ಠಾಣೆಯ ಹತ್ತಿರ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್ ಹೋಂ ಹತ್ತಿರ, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, ಜೆಎನ್‍ಎನ್‍ಸಿಇ ಕಾಲೇಜ್, ಅಕ್ಷರ ಕಾಲೇಜ್ ಬಳಿ, ಕೃಷಿ ಕಾಲೇಜ್ ಬಳಿ, ಬಸವನಗಂಗೂರು ಕ್ರಾಸ್, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾಭಾರತಿ ಕಾಲೇಜ್ ಬಳಿ, ಎನ್‍ಇಎಸ್ ಲೇಔಟ್ ಕುವೆಂಪು ನಗರ.
Also read: ಗಮನಿಸಿ! ಜ.6ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
100 ಅಡಿ ರಸ್ತೆಯ ನಿರ್ಮಲ ಹಾಸ್ಪಿಟಲ್ ಹತ್ತಿರ, ರಾಜೇಂದ್ರನಗರ ಚಾನಲ್ ಬಳಿ, ಗಾಂಧಿನಗರ, ಗಣಪತಿ ದೇವಸ್ಥಾನ ರವೀಂದ್ರನಗರ, ಬ್ಲಡ್ ಬ್ಯಾಂಕ್ ಹತ್ತಿರ ಮಾತ್ರ ನಿಲುಗಡೆ ಮಾಡಬೇಕು.
ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಳಘಟ್ಟ ಕ್ರಾಸ್‍ನಿಂದ ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣದವರೆಗಿನ ರಸ್ತೆಯ ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀನ್, ಪದ್ಮಾ ಟಾಕಿಸ್, ಅಣ್ಣಾ ನಗರ ಚಾನೆಲ್, ಗೋಪಾಳ ವಿನಾಯಕ ಸರ್ಕಲ್, ಗುಡ್‍ಲಕ್ ಸರ್ಕಲ್, ವೃದ್ದಾಶ್ರಮ. ಗೋಪಾಳಗೌಡ 100 ಅಡಿ ರಸ್ತೆಯ ಗೋಪಾಳಗೌಡ ಮೋರ್ ಶಾಪ್ ಹತ್ತಿರ, ಗೋಪಾಳಗೌಡ ಬಡಾವಣೆಯ ಹೆಚ್ ಪೆಟ್ರೋಲ್ ಬಂಕ್ ಎದುರು. ವಿಜಯನಗರ ಮುಖ್ಯ ರಸ್ತೆಯ ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್. ತುಂಗಾನಗರ 100 ಅಡಿ ರಸ್ತೆಯ ಚಾಲುಕ್ಯ ನಗರ(ಎಲ್‍ಹೆಚ್‍ಎಸ್), ಚಾಲುಕ್ಯ ನಗರ(ಆರ್‍ಹೆಚ್‍ಎಸ್), ಚಾಲುಕ್ಯನಗರ ಓಪನ್ ಗ್ರೌಂಡ್, ತುಂಗಾನಗರ ಪಿಹೆಚ್‍ಸಿ ಹೊರ ವರ್ತುಲ, ತುಂಗಾನಗರ ಪೊಲೀಸ್ ಠಾಣೆ.
ಸಾಗರ ರಸ್ತೆಯ ಮೆಗ್ಗಾನ್ ಆಸ್ಪತ್ರೆ(ಹೊರಗೆ), ಎಸ್‍ಪಿ ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್(ಎಲ್‍ಹೆಚ್‍ಎಸ್), ಎಪಿಎಂಸಿ ಹತ್ತಿರ(ಎಲ್‍ಹೆಚ್‍ಎಸ್), ಎಪಿಎಂಸಿ ಹತ್ತಿರ (ಆರ್‍ಹೆಚ್‍ಎಸ್), ಬಿ.ಕೃಷ್ಣಪ್ಪ ಸರ್ಕಲ್(ಆಲ್ಕೊಳ ಸರ್ಕಲ್), ಡಿವಿಜಿ ಸರ್ಕಲ್(ಎಲ್‍ಹೆಚ್‍ಎಸ್), ಹೋಟೆಲ್ ಅಶೋಕ ಗ್ರಾಂಡ್, ಹೋಟೆಲ್ ಅಶೋಕ ಗ್ರಾಂಡ್ ಚರ್ಚ್ ಎದುರು, ನಂಜಪ್ಪ ಲೈಫ್‍ಕೇರ್ ಹತ್ತಿರ, ಗಾಡಿಕೊಪ್ಪ, ಮಹೇಂದ್ರ ಶೋ ರೂಂ ಎದುರುಗಡೆ, ಕಾಸ್ಮೊಕ್ಲಬ್ ಎದುರು, ಪ್ರೊ.ಬಿ.ಕೃಷ್ಣಪ್ಪ ಫ್ರೀ ಲೆಫ್ಟ್.
ಸೋಮಿನಕೊಪ್ಪ ರಸ್ತೆಯ ಕಾಶಿಪುರ ಮುಖ್ಯರಸ್ತೆ, ಎಸ್‍ಆರ್‍ಎಸ್ ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯರಸ್ತೆ, ಆದರ್ಶನಗರ, ಸೋಮಿನಕೊಪ್ಪ ಮುಖ್ಯ ರಸ್ತೆ. ವಿನೋಬನಗರ 100 ಅಡಿ ರಸ್ತೆಯ ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ, ಇಂದಿರಾಗಾಂಧಿ ಸರ್ಕಲ್(ಆರ್‍ಹೆಚ್‍ಎಸ್), ಶಿವಾಲಯ ವಿನೋಬನಗರ, ಹಳೇ ಜೈಲ್ ರಸ್ತೆ ಹತ್ತಿರ(ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರದ ಬಳಿ, ಮಾಧವ ನೆಲೆ ಹತ್ತಿರ, ಕಲ್ಲಹಳ್ಳಿ, ಕಾಶಿಪುರ ರಸ್ತೆ. ಜೈಲ್ ರಸ್ತೆಯ ಹೊಸಮನೆ ಬಡಾವಣೆ, ಬೊಮ್ಮನಕಟ್ಟೆ ರಸ್ತೆಯ ಬೊಮ್ಮನಕಟ್ಟೆ(ಆರ್‍ಹೆಚ್‍ಎಸ್), ಬೊಮ್ಮನಕಟ್ಟೆ(ಎಲ್‍ಹೆಚ್‍ಎಸ್). ಎನ್‍ಟಿ ರಸ್ತೆಯ ಎನ್‍ಟಿ ರಸ್ತೆ ಎದುರು ಹೆಚ್‍ಪಿ ಪೆಟ್ರೋಲ್ ಬಂಕ್, ಮಂಡ್ಲಿ(ಎಲ್‍ಹೆಚ್‍ಎಸ್), ಮಂಡ್ಲಿ (ಆರ್‍ಹೆಚ್‍ಎಸ್).
ಬೈಪಾಸ್ ರಸ್ತೆಯ ತುಂಗಾ ನದಿಯ ಹೊಸ ಸೇತುವೆ, ಸೂಳೆಬೈಲು(ಎಲ್‍ಹೆಚ್‍ಎಸ್),, ಊರುಗಡೂರು(ಆರ್‍ಹೆಚ್‍ಎಸ್), ಬೈಪಾಸ್ ರಸ್ತೆ ನರ್ಸಿಂಗ್ ಕಾಲೇಜ್ ಹತ್ತಿರ ನಂಜಪ್ಪ ಬಡಾವಣೆ, ಊರುಗಡೂರು(ಎಲ್‍ಹೆಚ್‍ಎಸ್), ಸೂಳೆಬೈಲ್(ಆರ್‍ಹೆಚ್‍ಎಸ್), ನಿಸರ್ಗ ಲೇ ಔಟ್, ಪ್ರಿಯಾಂಕ ಲೇ ಔಟ್ ಈ ಸಿಟಿ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‍ಗಳನ್ನು ನಿಲ್ಲಿಸಬೇಕೆಂದು ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post