ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರೀ ಮಳೆ ಕೇರಳದ ವಯನಾಡಿನಲ್ಲಿ #Wayanadu ಗ್ರಾಮವನ್ನೇ ಸರ್ವನಾಶ ಮಾಡಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಸಹ ಹಲವು ಕಡೆಗಳಲ್ಲಿ ಗುಡ್ಡ ಕುಸಿತ #Landslide ಉಂಟಾಗಿದ್ದು, ಮೂರು ತಾಲೂಕುಗಳನ್ನು ಭೂಕುಸಿತ ಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಈ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳನ್ನು ಭೂಕುಸಿತ ಪೀಡಿತ ಎಂದು ಘೋಷಿಸಿ, ಗರಿಷ್ಠ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಈ ಮಳೆಗಾಲದಲ್ಲಿ ಅಲ್ಲಲ್ಲಿ ಭೂ ಕುಸಿತಗಳು ಸಂಭವಿಸಿದ್ದು, ಭಾರಿ ಪ್ರಮಾಣದಲ್ಲಿ ನಾಶನಷ್ಟ ಉಂಟಾಗಿದೆ. ರಸ್ತೆಗೆ ಗುಡ್ಡೆಗಳು ಜರಿದು ಬಿದ್ದು ವಾಹನ ಸಂಚಾರ ವ್ಯತ್ಯಯವಾದ ಅನೇಕ ಘಟನೆಗಳು ಸಂಭವಿಸಿವೆ.
Also read: ತೀರ್ಥಹಳ್ಳಿ | ಮತ್ತಿಗ ಬಳಿ ಭೀಕರ ರಸ್ತೆ ಅಪಘಾತ ಪ್ರಕರಣ | ಚಿಕಿತ್ಸೆ ಫಲಕಾರಿ ಆಗದೇ ಯುವಕ ಸಾವು
ಉತ್ತರ ಕನ್ನಡ ಜಿಲ್ಲೆಯ ಶಿರೂರು, ಕೇರಳದ ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂ ಕುಸಿತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಜಿಲ್ಲೆಯ 3 ಸೇರಿ 31 ತಾಲೂಕುಗಳನ್ನು ಭೂ ಕುಸಿತ ಪೀಡಿತ ಎಂದು ಘೋಷಿಸಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.
ಉಳಿದಂತೆ ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರಿನ ಕೆಲವು ತಾಲೂಕುಗಳನ್ನು ಭೂಕುಸಿತ ಪೀಡಿತ ಎಂದು ಹೆಸರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post