ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ರಾತ್ರಿ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಿತ್ತೆಸೆದು, ಕಾಲಿನಿಂದ ತುಳಿದು ದುರ್ಷ್ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿ…
ಇನ್ನು, ಘಟನೆ ಹಿನ್ನೆಲೆಯಲ್ಲಿ ಉದ್ಘಿಘ್ನಗೊಂಡಿದ್ದ ಬಡಾವಣೆಯ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಾಗಿಗುಡ್ಡದ ಬಂಗಾರಪ್ಪನವರ ಬಡಾವಣೆಯಲ್ಲಿ ನಿನ್ನೆ ಸಂಜೆಯ ವೇಳೆಗೆ ಗಣಪತಿ ಮತ್ತು ನಾಗನ ವಿಗ್ರಹ ಹಾನಿಗೊಳಿಸಿದ ಆರೋಪದ ಅಡಿಯಲ್ಲಿ ಕೊಂಚ ಗೊಂದಲ ಉಂಟಾಗಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಸಂಜೆಯ ವೇಳೆಗೆ ಬಡಾವಣೆಯಲ್ಲಿ ಅನ್ಯಕೋಮಿನವರು ವಿಗ್ರಹಗಳನ್ನ ಹಾನಿಗೊಳಿಸಿದ್ದಾರೆ ಎಂಬ ವಿಷಯ ಕೊಂಚ ಗೊಂದಲಗಳಿಗೆ ಕಾರಣ ಉಂಟು ಮಾಡಿತ್ತು. ನಂತರ ಎಸ್ಪಿ ಅವರ ಭೇಟಿ ಮತ್ತು ಖಡಕ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣ ಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ವಿಗ್ರಹ ಹಾನಿ ಘಟನೆಯ ನಂತರ ಮತ್ತೆ ಯಾವುದೇ ಬೇರೆ ಘಟನೆಗಳು ನಡೆದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆಯಲ್ಲಿ ಇಬ್ಬರ ಬಂಧನವಾಗಿದೆ ಎಂದು ವಾಟ್ಸಪ್ ಸಂದೇಶ ರವಾನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post