ಕಲ್ಪ ಮೀಡಿಯಾ ಹೌಸ್ | ಹೊಳೊಹೊನ್ನೂರು |
ಇಲ್ಲಿನ ಬ್ರಾಹ್ಮಣರ ಬೀದಿಯಲ್ಲಿರುವ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿ, ನವಗ್ರಹ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ಕಟ್ಟಡ ಉದ್ಘಾಟನೆಯು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾಂದಗಳವರ ಅಮೃತ ಹಸ್ತರಿಂದ ನೆರವೇರಿತು.
ಜೀರ್ಣೋದ್ದಾರಗೊಂಡ ಈ ದೇವಾಲಯದ ಉದ್ಘಾಟನೆ ಹಾಗೂ ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾನೆಯ ಕಾರ್ಯವು ಎರಡು ದಿನಗಳ ಕಾಲ ವಿಧಿವತ್ತಾಗಿ ನೆರವೇರಿತು.
Also Read: ಸೋಮಿನಕೊಪ್ಪ ಕೆರೆಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುದುರೆಗಳ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಈ ಅಂಗವಾಗಿ ಮೇ 19ರಂದು ಮುಂಜಾನೆ ಸುಪ್ರಭಾತ, ಶ್ರೀಗಳವರ ಪಾದಪೂಜೆ, ಆಜ್ಞಾ ಸ್ವೀಕಾರ, ಗಂಗಾ ಪೂಜೆ, ಗಣಪತಿ ಪೂಜೆ, ಕಳಶ ಪೂಜೆ, ಬಿಂಬ ಆವಾಹನ, ಪ್ರತಿಷ್ಠಾಂಗ ಹೋಮ ನಡೆಯಿತು. ಆನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಕಾರ್ಯಕ್ರಮ ನಿಮಿತ್ತ ಶ್ರೀಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಮೇ 20ರಂದು ಪುನರ್ ಪ್ರತಿಷ್ಠಾಪನೆ, ಪ್ರಧಾನ ಗೋಪುರ ಕಳಶ ಸ್ಥಾಪನೆ, ಪಂಚಾಮೃತ ಅಭಿಷೇಕ, ಸಂಸ್ಥಾನ ಪೂಜೆ, ಸಂಜೆ ಗುರುಗಳಿಂದ ಅನುಗ್ರಹ ಸಂದೇಶ ನಡೆಯಿತು.
ಜೀರ್ಣೋದ್ಧಾರ
ಈ ಪುರಾತನ ದೇವಾಲಯವು ಕೆಲವೊಂದು ಭಾಗವು ಶಿಥಿಲವಾದ ಕಾರಣ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಹಾಗೂ ದಾನಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದ್ದು, ವಿಶೇಷವಾಗಿ ರಾಜಗೋಪುರ ನಿರ್ಮಿಸಲಾಗಿದೆ.
Also Read: ಮಾರಣಾಂತಿಕ ಖಾಯಿಲೆಗಳಿಗೆ ಮೂಲ ವಿಜ್ಞಾನಗಳ ಸಂಶೋಧನೆಯೇ ಮದ್ದು: ಪ್ರೊ. ರಂಗಪ್ಪ ಸಲಹೆ
ಆಂಜನೇಯ ಸ್ವಾಮಿ ವಿಗ್ರಹದ ಬಗ್ಗೆ
ಪ್ರಾಣದೇವರ ವಿಗ್ರಹವು 5 ಅಡಿ ಎತ್ತರವಿದೆ. ಎಡಕ್ಕೆ ಮುಖ ಮಾಡಿ ಬಲಗೈಯಲ್ಲಿ ಅಭಯ ನೀಡುತ್ತಿದ್ದು, ಎಡಗೈನಲ್ಲಿ ಸೌಗಂಧಿಕ ಪುಷ್ಪ ಹಿಡಿದು ನಿಂತಿರುವ ಶ್ರೀಸ್ವಾಮಿಯನ್ನು ಮೂಲತಃವಾಗಿ ವ್ಯಾಸರಾಜರು ಪ್ರತಿಷ್ಠಾಪನೆ ಮಾಡಿದ್ದರು. ಈಗ ಜೀರ್ಣೋದ್ಧಾರಗೊಂಡು ದೇವಾಲಯ ಸತ್ಯಾತ್ಮತೀರ್ಥರಿಂದ ಪುನರ್ ಪ್ರತಿಷ್ಠಾಪನೆಗೊಂಡಿರುವುದು ವಿಶೇಷ ಎನ್ನುತ್ತಾರೆ ಹೊಳೆಹೊನ್ನೂರು ಉತ್ತರಾದಿ ಮಠದ ಶ್ರೀನಿವಾಸಾಚಾರ್ಯರು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















