ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಹದ ಹಕ್ಕಿಯಲ್ಲಿ ಶಿವಮೊಗ್ಗದಿಂದಲೇ ಹಾರುವ ಮಲೆನಾಡಿಗರ ಕನಸು ಆಗಸ್ಟ್ 11ರಂದು ನನಸಾಗಲಿದ್ದು, ಇಂಡಿಗೋ ಸಂಸ್ಥೆಯ ವಿಮಾನ ಸಿಹಿಮೊಗೆಗೆ ಅಂದು ಬಂದು ಇಳಿಯಲಿದೆ.
ಯಾವ ವಿಮಾನ? ಎಷ್ಟು ಸೀಟ್ ಇರುತ್ತವೆ?
ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಇಂಡಿಯೋ ಎಟಿಆರ್-72 ವಿಮಾನ ಕಾರ್ಯಾಚರಣೆ ನಡೆಸಲಿದೆ. ಈ ವಿಮಾನದಲ್ಲಿ 72 ಸೀಟುಗಳು ಇರಲಿದ್ದು, ಪ್ರತಿನಿತ್ಯ ಹಾರಾಟ ನಡೆಸಲಿದೆ.
ನಿಲ್ದಾಣದಲ್ಲಿರಲಿವೆ ಈ ಸೌಲಭ್ಯಗಳು:
ಇನ್ನು, ವಿಮಾನ ಹಾರಾಟ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಅಗತ್ಯವಾಗಿರುವ ಸೌಕರ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಇಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಾಹನಗಳ ಸೌಕರ್ಯ, ಕಾಫಿ-ತಿಂಡಿ ಮಳಿಗೆಗಳು, ಅಗತ್ಯ ಆಂಬುಲೆನ್ಸ್ ಹಾಗೂ ಜಿಲ್ಲಾ ಪ್ರವಾಸೋದ್ಯಮಕ್ಕೆ ಒಂದು ಪ್ರತ್ಯೇಕ ಮಳಿಗೆಗಳು ಆರಂಭವಾಗಲಿವೆ.
ನೂತನ ವೆಬ್ ಸೈಟ್ ಆರಂಭ
ಇನ್ನು, ವಿಮಾನ ನಿಲ್ದಾಣದ ಅಧಿಕೃತ ವೆಬ್ ಸೈಟ್ ಅಭಿವೃದ್ಧಿಯಾಗಬೇಕಿದ್ದು, ಇದು ಶೀಘ್ರದಲ್ಲೇ ಆಗಲಿದೆ.
ಬಫರ್ ಝೋನ್ ಅಧಿಸೂಚನೆ
ಇನ್ನು, ವಿಮಾನ ಹಾರಾಟ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ನಿಲ್ದಾಣದ ಸುತ್ತಮುತ್ತ ಬಫರ್ ಝೋನ್ ಆಗಿ ಅಧಿಸೂಚನೆ ಹೊರಬೀಳಲಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿಮಾನ ಹಾರಾಟ ಆರಂಭವಾಗುವ ಆಗಸ್ಟ್ 11ರಂದು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಎಲ್ಲ ಅಂಶಗಳ ಕುರಿತು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
Also read: ಆ.11ರಂದು ಶಿವಮೊಗ್ಗಕ್ಕೆ ಮೊದಲ ವಿಮಾನ: ಹಾರಾಟದ ಸಮಯವೇನು? ಫಸ್ಟ್ ಯಾರು ಬರಲಿದ್ದಾರೆ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post