ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎಸ್‌ಪಿ ಮಿಥುನ್ ಕುಮಾರ್ ದ್ವಜಾರೋಹಣ ನೆರವೇರಿಸಿ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಗಣರಾಜ್ಯೋತ್ಸವದ ಶುಭಾಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ ಮತ್ತು ಡಿಎಆರ್ ಶಿವಮೊಗ್ಗ ಘಟಕದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಎ ಉಪ ವಿಭಾಗ ಡಿವೈಎಸ್.ಪಿ ಬಾಲರಾಜ್, ಡಿವೈಎಸ್.ಪಿ ಡಿಸಿಆರ್.ಬಿ ಪ್ರಭು, ಡಿವೈಎಸ್.ಪಿ ಡಿಎಆರ್ ಕೃಷ್ಣಮೂರ್ತಿ, ಶಿವಮೊಗ್ಗ – ಬಿ ಉಪ ವಿಭಾಗ ಡಿವೈಎಸ್.ಪಿ ಸುರೇಶ್ ನಾಯಕ್ ಹಾಗೂ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಮತ್ತು ಲಿಪಿಖ ಸಿಬ್ಬಂಧಿಗಳು ಹಾಜರಿದ್ದರು.
ಹೊಸಮನೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ನಗರದ ಹೊಸಮನೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪಾಲಿಕೆ ಸದಸ್ಯೆ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಲೋಹಿತ್, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಬಡಾವಣೆಯ ನಿವಾಸಿಗಳು, ಮಕ್ಕಳು ಉಪಸ್ಥಿತರಿದ್ದರು.
ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್:
ನಗರದ ಸಿಟಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ 74ನೇ ಗಣರಾಜ್ಯೋತ್ಸವನ್ನು ಬ್ಯಾಂಕಿನ ಅಧ್ಯಕ್ಷ ಎಸ್. ಕೆ. ಮರಿಯಪ್ಪ ಧ್ವಜಾರೋಹಣ ನೆರವೇರಿಸುವುದರ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ. ರಂಗನಾಥ್, ಖಜಾಂಚಿ ರುಕ್ಮಿಣಿ ವೇದವ್ಯಾಸು, ನಿರ್ದೇಶಕರುಗಳಾದ ಎಂ. ಉಮಾಶಂಕರ ಉಪಾಧ್ಯಾಯ, ಎಸ್ .ಪಿ. ಶೇಷಾದ್ರಿ, ಎನ್. ಹೊನ್ನಪ್ಪ, ರಿಚರ್ಡ್ ಕ್ವಾಟ್ರಸ್, ರಘುವೀರ್ ಸಿಂಗ್, ಸೀತಾರಾಮ ನಾಯಕ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಮನೋಜ್ ಕುಮಾರ್. ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಹಕರು ಉಪಸ್ಥಿತರಿದ್ದರು.
ಸರ್ ಎಂ ವಿಶ್ವೇಶ್ವರಯ್ಯ ಸೊಸೈಟಿ
ಸರ್ ಎಂ ವಿಶ್ವೇಶ್ವರಯ್ಯ ಸೊಸೈಟಿಯಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸೂರ್ಯನಾರಾಯಣ, ಉಪಾಧ್ಯಕ್ಷ ನಾಗರಾಜ, ಖಜಾಂಚಿ ಚಂದ್ರಶೇಖರ, ನಿರ್ದೇಶಕರಾದ ಮಾದವಮೂರ್ತಿ, ಶುಭಾರಾಘವೇಂದ್ರ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















