ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಜೂನ್ 30ರಂದು ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.
ಡಿವಿಎಸ್ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಡಿವಿಎಸ್ ಕಾಲೇಜ್ ಆವರಣದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ಸುಮಾರು 20ಕ್ಕೂ ಹೆಚ್ಚು ಸ್ಥಳೀಯ ಕಂಪನಿಗಳು ಇದರಲ್ಲಿ ಭಾಗವಹಿಸಲಿವೆ. ಎಸ್.ಎಸ್.ಎಲ್.ಸಿ.ಯಿಂದ ಮೇಲ್ಪಟ್ಟು, ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ನೀಡಲಾಗುವುದು. ಈ ಉದ್ಯೋಗ ಮೇಳಕ್ಕೆ ಆನ್‍ಲೈನ್ ನೊಂದಣಿಗೆ ಅವಕಾಶವಿದೆ. ಅಲ್ಲದೆ ಸ್ಥಳದಲ್ಲಿಯೂ ಕೂಡ ನೊಂದಣಿ ಮಾಡಿಕೊಳ್ಳಬಹುದು. ನಮ್ಮ ಸಂಘದ ವತಿಯಿಂದ ಜಿಲ್ಲೆಯಲ್ಲಿ ಉದ್ಯೋಗ ನೀಡಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಇಲ್ಲಿ ಆಯ್ಕೆ ಆಗದಿದ್ದವರಿಗೆ ಕೌಶಲ್ಯ ತರಬೇತಿಯನ್ನು ಕೂಡ ನೀಡಲು ಸಂಘ ಚಿಂತನೆ ಮಾಡಿದೆ ಎಂದರು.
Also read: ರಾಜ್ಯದಲ್ಲಿ ಒನ್ ಹೆಲ್ತ್ ಪ್ರಾಯೋಗಿಕ ಯೋಜನೆಗೆ ಅತುಲ್ ಚತುರ್ವೇದಿ ಚಾಲನೆ
ಹೆಚ್ಚಿನ ವಿವರ ಮತ್ತು ಮಾಹಿತಿಗಾಗಿ ಮೊ: 9448122646, 9880044040ಗೆ ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post