ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದಂತ ಹುಣಸೋಡು ಕ್ರಷರ್ ಸ್ಪೋಟಕ ಪ್ರಕರಣದಲ್ಲಿ ಬಂಧಿತರಾಗಿದ್ದಂತ ಐವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಜನವರಿ 21, 2021ರಂದು ನಡೆದಿದ್ದಂತ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿನ ಜಿಲೆಟಿನ್ ಕಟ್ಟಿ ಸ್ಪೋಟಕದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಅಲ್ಲದೇ ಮೂವರು ನಾಪತ್ತೆಯಾಗಿದ್ದರು. ಈ ಕುರಿತಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ 10 ಜನರನ್ನು ಬಂಧಿಸಲಾಗಿತ್ತು.
ಈ ಕುರಿತಂತೆ ವಿಚಾರಣೆ ನಡೆಸಿದಂತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದಂತ ಎಸ್ ಎ ಮುಸ್ತಾಪ ಹುಸೇನ್ ಅವರು, ಹುಣಸೋಡು ಕ್ರಷರ್ ಸ್ಪೋಟಕ ಪ್ರಕರಣದಲ್ಲಿ ಬಂಧಿತರಾಗಿದ್ದಂತ ಕ್ರಷರ್ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ, ಅವರ ಪುತ್ರ ಅವಿನಾಶ್ ಕುಲಕರ್ಣಿ, ಕ್ರಷರ್ ಮ್ಯಾನೇಜರ್ ವಿನೋಬನಗರದ ನರಸಿಂಹ, ಮುಮ್ತಾಜ್ ಅಹಮದ್ ಮತ್ತು ರಶೀದ್ ಎಂಬುವರಿಗೆ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಇನ್ನೂ ಇದೇ ಪ್ರಕರಣದಲ್ಲಿ ಕ್ರಷರ್ ಮಾಲೀಕ ರವೀಂದ್ರ ನಗರದ ಬಿವಿ ಸುಧಾಕರ್, ಆಂಧ್ರಪ್ರದೇಶದ ಅನಂತಪುರದ ಪಿ ಶ್ರೀರಾಮುಲು, ಅವರ ಪುತ್ರ ಪಿ ಮಂಜುನಾಥ್ ಸಾಯಿ, ಪೃಥ್ವಿನಾಥ ಸಾಹಿ ಹಾಗೂ ವಿಜಯಕುಮಾರ್ ಅವರಿಗೆ ನ್ಯಾಯಾಲಯವು ಜಾಮೀನನ್ನು ನಿರಾಕರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post