ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಿಂದ ಹೈದರಾಬಾದ್’ಗೆ #Hyderabad ಇಂದು ಮಧ್ಯಾಹ್ನ ಹಾರಬೇಕಿದ್ದ ಸ್ಪೈಸ್ ವಿಮಾನ ಹಾರಾಟ ಏಕಾಏಕಿ ರದ್ದಾಗಿದ್ದು, ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಿಂದ #Shivamogga ಹೈದರಾಬಾದ್’ಗೆ ಇಂದು ಮಧ್ಯಾಹ್ನ 3.30ಕ್ಕೆ ಹೊರಡಬೇಕಿದ್ದ ಸ್ಪೈಸ್ ವಿಮಾನದಲ್ಲಿ #Flight ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣದಿಂದಾಗಿ ಹಾರಾಟವನ್ನು ರದ್ದು ಮಾಡಲಾಯಿತು.
Also Read>> ಭಾರತ ವಿಶ್ವಗುರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ | ಶಾಸಕ ಚನ್ನಬಸಪ್ಪ ಹೇಳಿದ್ದೇನು?
ವಿಮಾನಯಾನ ಹಾಗೂ ಸ್ಪೈಸ್ ವಿಮಾನಯಾನ ಸಂಸ್ಥೆ ಸಿಬ್ಬಂದಿ ಜೊತೆಯಲ್ಲಿ ಪ್ರಯಾಣಿಕರು ಮಾತಿನ ಚಕಮತಿ ನಡೆಸಿದರು.
ಅಂದಾಜು 60 ಪ್ರಯಾಣಿಕರು ಹೈದರಾಬಾದ್’ಗೆ ಟಿಕೇಟ್ ಬುಕ್ ಮಾಡಿದ್ದರು ಎನ್ನಲಾಗಿದ್ದು, ಸುಮಾರು 30 ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಿದ ಹೈದರಾಬಾದ್’ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post