ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ನಾಯಕರು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಶ್ರಮದಿಂದ ಗೆಲುವು ಸಿಕ್ಕಿದೆ. ನಮ್ಮ ಕೆಲಸಗಳು, ಸಂಘಟಿತ ಪ್ರಯತ್ನ, ಮತದಾರರ ಪರಿಶ್ರಮ ಗೆಲುವಿನ ಹಿಂದೆ ಇದೆ. ಈ ಗೆಲುವನ್ನು ಮತದಾರರು, ನಮ್ಮ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ಡಿ.ಎಸ್. ಅರುಣ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಗೆಲ್ಲುವ ವಿಶ್ವಾಸವಿತ್ತು. ಅದರಂತೆಯೇ 350ಕ್ಕೂ ಹೆಚ್ಚು ಮತಗಳಿಂದ ವಿಜಯ ಸಾಧಿಸಿರುವುದು ಸಂತಸ ತಂದಿದೆ. ನಮಗೆ ಬೆಂಬಲ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಪಕ್ಷದ ಎಲ್ಲಾ ಪ್ರಮುಖರು ಹಾಗೂ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಇಡೀ ಕ್ಷೇತ್ರದಲ್ಲಿ ಬೆಂಬಲ ವ್ಯಕ್ತವಾಗಿದೆ. ಚುನಾವಣೆ ಘೋಷಣೆಗೆ ಮೊದಲೇ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಬೆಂಬಲ ಕಂಡು ಬಂದಿತ್ತು. ಕೇವಲ 21 ದಿನದಲ್ಲಿ ಅಭ್ಯರ್ಥಿ ಘೋಷಿಸಿ ಏನೂ ಮಾಡಲು ಆಗಲ್ಲ. ಇದು ಕಾರ್ಯಕರ್ತರ ಗೆಲುವು, ನಾನು ಪದನಿಮಿತ್ತ ಮಾತ್ರ. ಈ ಗೆಲುವಿನ ಹಿಂದೆ ಎಲ್ಲರ ಶ್ರಮ ಇದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.

- ಚಲಾವಣೆಯಾದ ಮತ-4156
- ಅಂಗೀಕೃತ ಮತ – 4047
- ತಿರಸ್ಕೃತ ಮತ – 109
- ಡಿ.ಎಸ್.ಅರುಣ್ ಪಡೆದ ಮತ 2192
- ಆರ್.ಪ್ರಸನ್ನಕುಮಾರ್ ಅವರು ಪಡೆದ ಮತ 1848
- ಶಿವಕುಮಾರ್ ಅವರು ಪಡೆದ ಮತ 03
- ರವಿ ಅವರು ಪಡೆದ ಮತ 04
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post