ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆ ಮಾಡಿದ ಕೃತ್ಯದ ಬಗ್ಗೆ ನಿಮಗಿಂತಲೂ ಹೆಚ್ಚು ನನಗೆ ಸಿಟ್ಟಿದೆ. ಹಾಗೆಂದು ನೀವು ಹೇಳಿದಂತೆ ಎನ್’ಕೌಂಟರ್ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ #Minister Eshwarappa ಖಡಕ್ ಆಗಿ ಹೇಳಿದ್ದಾರೆ.
ನಿನ್ನೆ ರಾತ್ರಿ ಭೀಕರವಾಗಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ #Bajarangadala activist Harsha ನಿವಾಸಕ್ಕೆ ಭೇಟಿ ನೀಡಿದ ನಂತರ ನೆರೆದಿದ್ದ ಹಿಂದೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹರ್ಷ ನನ್ನ ಮಗನಂತೆ ಇದ್ದನು. ಅವನ ಹತ್ಯೆ ನನಗೆ ಮಾತ್ರವಲ್ಲ ಇಡಿಯ ಹಿಂದೂ ಸಮಾಜಕ್ಕೆ ಅಪಾರ ನೋವು ತಂದಿದೆ. ಈ ವಿಚಾರ ಪ್ರಧಾನಿಯವರೆಗೂ ತಲುಪಿದೆ. ನಗರದಲ್ಲಿ ಶಾಂತಿ ಕಾಪಾಡುವಂತೆ ನರೇಂದ್ರ ಮೋದಿಯವರು ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ #CM Basavara Bommai ಸಹ ತುರ್ತು ಸಭೆ ನಡೆಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ #Former CM Yadiyurappa ಅವರೂ ಸಹ ಇದನ್ನೇ ಸೂಚಿಸಿದ್ದಾರೆ ಎಂದಿದ್ದಾರೆ.
Also read: ಮನೆಗಳ ಮೇಲಿಂದ ಕಲ್ಲು ತೂರಾಟ, ಲಾಂಗು-ಮಚ್ಚು ಝಳಪಿಸಿ ಕಿಡಿಗೇಡಿಗಳು: ಹೆದರಿದ ಜನತೆ
ಉದ್ರಿಕ್ತ ಅಹಿತಕರ ಘಟನೆಯಿಂದ ಏನೂ ಸಾಧನೆಯಾಗುವುದಿಲ್ಲ. ಪ್ರಧಾನಿ, ಸಿಎಂ, ಹಾಗೂ ಮಾಜಿ ಸಿಎಂ ಬಿಎಸ್’ವೈ ಅವರುಗಳ ಮಾತಿಗೆ ಬೆಲೆ ಕೊಟ್ಟು ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ. ಹೀಗಾಗಿ, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬೇಡಿ. ಹತ್ಯೆ ಆರೋಪಿ ಎಲ್ಲರನ್ನೂ ಶೀಘ್ರವೇ ಬಂಧಿಸಲಾಗುವುದು. ಮುಲಾಜಿಲ್ಲದೇ ಕಾನೂನು ರೀತಿ ಕ್ರಮ ಕೈಗೊಳ್ಳಲಾವುದು. ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದು ಮನವಿ ಮಾಡಿದರು.
ಮೆರಣಿಗೆಯಲ್ಲಿ ಭಾಗಿ:
ಇನ್ನು, ಮೃತ ಹರ್ಷನ ಮನೆಗೆ ಭೇಟಿ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ರಾಘವೇಂದ್ರ ಅವರುಗಳು ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನಂತರ ಆರಂಭಗೊಂಡ ಹರ್ಷನ ಅಂತಿಮ ಮೆರವಣಿಗೆಯಲ್ಲಿ ಇಬ್ಬರೂ ನಾಯಕರು ಪಾಲ್ಗೊಂಡು ಸಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post