ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಘುಪತಿ ಭಟ್ #Raghupathi Bhat ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಸಂಪೂರ್ಣ ಬೆಂಬಲವಿದೆ. ಹಾಗೂ ಅವರನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ನಗರದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಘುಪತಿ ಭಟ್ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಅಭಿವೃದ್ಧಿಶೀಲ ಮತ್ತು ಕ್ರಿಯಾಶೀಲ ರಾಜಕಾರಣಿ ಜಾತಿ ಇಲ್ಲದ ವ್ಯಕ್ತಿ ಅವರನ್ನು ಕೂಡ ಕೆಲವು ವ್ಯಕ್ತಿಗಳು ಮೋಸ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಾವಿರಾರು ಕಾರ್ಯಕರ್ತರ ಆಸೆ ಬಿಜೆಪಿ ಶುದ್ಧೀಕರಣಯಾಗಬೇಕು. ನನಗೆ ಮಾಡಿದ ಹಾಗೆ ಅವರಿಗೂ ಬಿಜೆಪಿ ನಾಯಕರು ಮೋಸ ಮಾಡಿದ್ದಾರೆ ಎಂದರು.
ಬ್ರಹ್ಮ ಅಡ್ಡ ಬಂದರು ರಘುಪತಿ ಭಟ್‍ರ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಇನ್ನೊಬ್ಬ ಅಭ್ಯರ್ಥಿ ಆಯನೂರು ಮಂಜುನಾಥ್‍ರವರ ಪಕ್ಷ ನಿಷ್ಠೆ ಎಲ್ಲರಿಗೂ ಗೊತ್ತಿದೆ. ರಾಷ್ಟ್ರಭಕ್ತರ ಬಳಗ ನೈರುತ್ಯ ಪದವೀಧರ ಕ್ಷೇತ್ರದ ಎಲ್ಲಾ ಮತದಾರರನ್ನು ವೈಯುಕ್ತಿಕವಾಗಿ ಸಂಪರ್ಕಿಸಿ ಮತಹಾಕುವ ಹಾಗೆ ಶ್ರಮವಹಿಸಿ ಅವರ ಗೆಲುವಿಗೆ ಕಾರಣರಾಗಬೇಕು ಎಂದರು.
Also read: ಡಾ. ಧನಂಜಯ ಸರ್ಜಿ ಅವರ ಗೆಲುವಿಗೆ ಪ್ರತಿ ಕಾರ್ಯಕರ್ತರೂ ಶ್ರಮಿಸಬೇಕು: ಎಸ್. ದತ್ತಾತ್ರಿ ಕರೆ
ಎಂ. ಶಂಕರ್ ಮಾತನಾಡಿ, ನನ್ನ ತಂದೆ ಆನಂದರಾವ್ ಗೆಲ್ಲಲು ನಾನು ಎರಡು ಬಾರಿ ನಗರಸಭಾ ಸದಸ್ಯನಾಗಿ ಅಧ್ಯಕ್ಷರಾಗಲು ಈಶ್ವರಪ್ಪನವರೇ ಕಾರಣ. ಈ ಚುನಾವಣೆಯಲ್ಲಿ ರಘುಪತಿ ಭಟ್ ಮೊದಲ ಸ್ಥಾನದಲ್ಲಿದ್ದಾರೆ. ಎಲ್ಲೆಡೆ ಒಳ್ಳೆಯ ವಾತಾವರಣ ಇದೆ. ಅವರದ್ದು ಬಂಡಾಯ ಸ್ಪರ್ಧೆಯಲ್ಲ. ನಮ್ಮ ಸರ್ವೋಚ್ಛ ನಾಯಕ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದರಿಲ್ಲ. ಗೆಲ್ಲುವ ಅಭ್ಯರ್ಥಿಯಾದ ರಘುಪತಿಭಟ್ ಅವರಿಗೆ ಒಂದು ಗೆರೆ ಹಾಕಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post