ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಸಮಾಜದ ರಕ್ಷಣೆಗಾಗಿ ಅಗತ್ಯ ಬಂದರೆ ತಲ್ವಾರ್ ಹಾಗೂ ಶಸ್ತ್ರಾಸ್ತ್ರಗಳ ಮೂಲಕ ಉತ್ತರ ಕೊಡಲೂ ಸಹ ನಮಗೆ ಬರುತ್ತದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ Arun Puttila ಎಚ್ಚರಿಕೆ ನೀಡಿದ್ದಾರೆ.
ಈದ್ ಮೆರವಣಿಗೆ ವೇಳೆ ಗಲಭೆ ನಡೆದ ಶಿವಮೊಗ್ಗದ ರಾಗಿಗುಡ್ಡ Shivamogga Raagigudda ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಮುಸ್ಲೀಂ ತುಷ್ಟೀಕರಣಕ್ಕಾಗಿ, ಮುಸ್ಲೀಂರ ಮತಗಳನ್ನು ಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಇಂತಹ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಈ ಪ್ರೇರಣೆಯಿಂದಲೇ ಇಂತಹ ಪೂರ್ವನಿಯೋಜಿತ ಕೃತ್ಯಗಳು ನಡೆಯುತ್ತಿವೆ ಎಂದು ಚಾಟಿ ಬೀಸಿದರು.
Also read: ಶೃಂಗೇರಿ | ಎಂದಿನಿಂದ ಶರನ್ನವರಾತ್ರಿ ಆರಂಭ? ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ? ಇಲ್ಲಿದೆ ಮಾಹಿತಿ
ರಾಗಿಗುಡ್ಡದಲ್ಲಿ ನಡೆದ ಘಟನೆ ಪೂರ್ವನಿಯೋಜಿತವಾಗಿದ್ದು, ಮತಾಂಧ ಮುಸ್ಲಿಂ ಸಮುದಾಯದಿಂದ ನಡೆದಿದೆ. ಇಂತಹ ಕೃತ್ಯಗಳಿಗೆ ನಮಗೆ ಉತ್ತರ ನೀಡಲು ಬರುತ್ತದೆ. ಹಿಂದೂ ಸಮುದಾಯದ ಪರವಾಗಿ ನಾವಿದ್ದು, ನಮ್ಮ ರಕ್ಷಣೆಗಾಗಿ ಅವಶ್ಯಕತೆ ಬಂದರೆ ತಲ್ವಾರ್, ಶಸ್ತ್ರಾಸ್ತ್ರ ಮೂಲಕ ಉತ್ತರ ನೀಡಲೂ ಸಹ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಸ್ಕ್ರೂಡ್ರೈವರ್, ಸ್ಪಾನರ್ ಹೊರತುಪಡಿಸಿ ತಲ್ವಾರ್’ಗಳಿಗೆ ಪೂಜೆ ಮಾಡಿ. ಪ್ರತಿ ಮನೆಯಲ್ಲಿಯೂ ತಲ್ವಾರ್’ಗಳಿಗೆ ಪೂಜೆ ಮಾಡಬೇಕು. ಆಯುಧ ಪೂಜೆಯ ದಿನ ಆಯುಧಗಳಿಗೆ ಪೂಜೆ ಮಾಡಿಟ್ಟುಕೊಳ್ಳಿ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರಲಿದೆ ಎಂದರು.
ಗಲಭೆಯಲ್ಲಿ ಹಾನಿಗೊಳಗಾದ ಹಿಂದೂಗಳ ಮನೆಗಳಿಗೆ ಭೇಟಿ ನೀಡಿ, ಸಾಂತ್ವಾನ ಹೇಳಲು ಇಲ್ಲಿಗೆ ಆಗಮಿಸಿದ್ದೇನೆ. ಹಿಂದೂಗಳ ಜೊತೆಗೆ ನಾವಿದ್ದೇವೆ. ಮುಸ್ಲಿಂ ಪುಷ್ಟೀಕರಣಕ್ಕೆ, ಮುಸ್ಲಿಂ ಮತಗಳನ್ನು ಓಲೈಸಲು, ಸರಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡ್ತಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಗುಡುಗಿದರು.
ಅನೇಕ ರೀತಿಯ ದಾಳಿ, ನೋವು ಅಪಮಾನದ ನಡುವೆ ಹಿಂದು ಸಮಾಜ ರಕ್ಷಣೆ ಮಾಡಬೇಕಿದೆ. ರಾಗಿಗುಡ್ಡದಲ್ಲಿ ದಾಳಿಗೊಳಗಾದ ಮನೆಯ ನಿವಾಸಿಗಳಿಗೆ ರಾಜ್ಯ ಸರ್ಕಾರ ತತಕ್ಷಣ ಪರಿಹಾರ ಕೊಡಬೇಕು. ಅಲ್ಲದೇ, ಹಾನಿಯಾದ ಮನೆಗಳ ರಿಪೇರಿಯ ಸಂಪೂರ್ಣ ಖರ್ಚನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















