ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ಗೋ ಶಾಲೆಗಳನ್ನು ತೆರೆಯುವುದಿಲ್ಲ ಎಂಬ ಸರ್ಕಾರದ ನಿರ್ಧಾರ ಹಿಂದೂ ಸಮಾಜದ ವಿರುದ್ಧವಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #KS Eshwarappa ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ಜಿಲ್ಲೆಗೂ ಒಂದು ಗೋಶಾಲೆ ಆರಂಭಿಸಬೇಕು ಎಂದು ನಿರ್ಧರಿಸಿ 14 ಗೋಶಾಲೆಗಳನ್ನು ತೆರೆಯಲಾಗಿತ್ತು. ಇನ್ನೂ 24 ಗೋಶಾಲೆಗಳನ್ನು ಪ್ರಾರಂಭ ಮಾಡಬೇಕಿತ್ತು. ಆದರೆ, ಸರ್ಕಾರ ಯಾವುದೇ ಕಾರಣಕ್ಕೂ ಗೋಶಾಲೆಗಳನ್ನು ಪ್ರಾರಂಭ ಮಾಡುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ. ಇದು ತೀವ್ರ ಖಂಡನೀಯ ಎಂದರು.
ಇದಕ್ಕೆ ಕಾರಣವನ್ನು ಸರ್ಕಾರ ಕೊಡುವುದು ಆಶ್ಚರ್ಯವಾಗಿದೆ. ಗೋಶಾಲೆಗೆ ಗೋವುಗಳು ಬಾರದೇ ಇದ್ದುದರಿಂದ ಅವುಗಳನ್ನು ತೆರೆಯಲಾಗುವುದಿಲ್ಲ ಎನ್ನುತ್ತಾರೆ. ಆದರೆ, ಶಿವಮೊಗ್ಗವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಬ್ರಾಹ್ಮಣ ಸಂಘ, ದೈವಜ್ಞ, ಜೈನ ಸಮಾಜದವರು ಗೋಶಾಲೆ ನಡೆಸುತ್ತಿದ್ದಾರೆ. ಅಲ್ಲಿ ಗೋವುಗಳೇ ಹೆಚ್ಚಾಗಿವೆ. ಸರ್ಕಾರ ಮಾತ್ರ ಗೋವುಗಳು ಬರುತ್ತಿಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದರು.
Also read: ಆಪರೇಷನ್ ಹಸ್ತ ನಡೆಯುತ್ತಿದೆ, ಆದರೆ… ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದೇನು?
ಉರ್ದು ಶಾಲೆ ಮತ್ತು ಮದರಸಾಗಳಲ್ಲಿ #Madarasa ಮಕ್ಕಳಿಲ್ಲ ಎಂದರೆ ಈ ಸರ್ಕಾರ ಅವುಗಳನ್ನು ಮುಚ್ಚಿಬಿಡುತ್ತಾ? ಏಕೆ ಹಿಂದೂ ಸಮಾಜದ ಮೇಲೆ ಅವರಿಗೆ ಈ ಆಕ್ರೋಶ? ಹಿಂದೂ ಸಮಾಜವನ್ನು ಹಗುರವಾಗಿ ತೆಗೆದುಕೊಳ್ಳಲಾಗುತ್ತಿದೆ. ಹಿಂದೂಗಳು ಸುಮ್ಮನಿದ್ದಾರೆ ಎಂದು ಇದರ ಅರ್ಥವೇ? ತಕ್ಷಣವೇ ಈ ನಿರ್ಣಯ ವಾಪಸ್ ತೆಗೆದುಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಶಾಲೆಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಉಮೇಶ್ ಆರಾಧ್ಯ, ಎಂ. ಶಂಕರ್, ಬಾಲು, ಶಿವಾಜಿ, ಕಿಟ್ಟಿ, ಠಾಕ್ರಾನಾಯ್ಕ, ಮಂಜುನಾಥ್, ಶಂಕ್ರಾನಾಯ್ಕ್, ಕುಬೇರಪ್ಪ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post