ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸರ್ಕಾರ ಏನೇ ಕಠಿಣ ಕ್ರಮಕೈಗೊಂಡರೂ ಜನ ಮಾಸ್ಕ್ ಧರಿಸದೇ ಓಡಾಡಿದರೆ ಕೊರೋನಾ ನಿಯಂತ್ರಣ ಹೇಗೆ ಸಾಧ್ಯ?
ಇಂದು ಬೆಳಿಗ್ಗೆ 6ಗಂಟೆಯಿಂದ 10ರವರೆಗೆ ಲಾಕ್ ಡೌನ್ ನಿಯಮ ಕೊಂಚ ಸಡಿಲಗೊಳಿಸಿದ್ದನ್ನೇ ಲಾಭವಾಗಿ ಪಡೆದ ಸಾರ್ವಜನಿಕರು, ಮಾಸ್ಕ್ ಧರಿಸದೇ ನಗರದ ಎಪಿಎಂಸಿ ಆವರಣದಲ್ಲಿ ತರಕಾರಿಗಾಗಿ ಮುಗಿಬಿದ್ದು ನೂಕುನುಗ್ಗಲಾಯಿತು.
ಜನಸಂದಣಿಯಲ್ಲಿ ಕನಿಷ್ಠ ಅಂತರವನ್ನೂ ಲೆಕ್ಕಿಸದೆ, ಮಾಸ್ಕ್ ಧರಿಸದೇ ಓಡಾಡಿದವರಿಗೆ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದರು.
ದಂಡದ ಭಯವನ್ನೂ ಲೆಕ್ಕಿಸದ ಜನಕ್ಕೆ ಯಾವರೀತಿ ಶಿಕ್ಷೆ ವಿಧಿಸಬೇಕೋ ತಿಳಿಯದಾಗಿದೆ. ಸರ್ಕಾರದೊಂದಿಗೆ ಸಹಕರಿಸಿ ಎಂದು ಮುಖ್ಯಮಂತ್ರಿಗಳು, ಸಂಸದರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರೂ ಗಣನೆಗೆ ತೆಗೆದುಕೊಳ್ಳದೇ ಜನಸಂಣಿಯಲ್ಲಿ ಓಡಾಡುತ್ತಿರುವುದು ನೋಡಿದರೆ, ಕೊರೋನಾ ಹೇಗೆ ನಿಯಂತ್ರಣಕ್ಕೆ ಬರುತ್ತದೆ? ಸರಪಳಿ ಹೇಗೆ ತುಂಡಾಗುತ್ತದೆ? ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post