ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ಕೊಟ್ಟ ಮಾತಿನಂತೆ ವೈಯಕ್ತಿಕ ಪರಿಹಾರ ನೀಡಿದ್ದು, ಈ ಕುಟುಂಬಳಿಗೆ ಇನ್ನೂ ಹೆಚ್ಚಿನ ಸಹಾಯ ಅವಶ್ಯಕತೆಯಿದ್ದಲ್ಲ ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಮುಖಂಡರಾದ ಗೀತಾ ಶಿವರಾಜಕುಮಾರ್ #Geetha Shivarajkumar ಹೇಳಿದರು.
ಕೆಲವು ದಿನಗಳ ಹಿಂದೆ ಹಾವೇರಿ #Haveri accident ಬಳಿ ನಡೆದ ಬೀಕರ ಅಪಘಾತದಲ್ಲಿ ಮೃತ ಪಟ್ಟ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಕುಟುಂಬಸ್ತರ ಮನೆಗಳಿಗೆ ಇಂದು ಕಾಂಗ್ರೆಸ್ ಮುಖಂಡರಾದ ಗೀತಾ ಶಿವರಾಜ್ ಕುಮಾರ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ #Shivarajkumar ಭೇಟಿ ನೀಡಿ ಸಾಂತ್ವಾನ ಹೇಳಿದ ನಂತರ ಅವರು ಮಾತನಾಡಿದರು.
ಈ ರೀತಿಯ ಘಟನೆ ಎಲ್ಲಿಯು ನಡೆಯಬಾರದು ದೇವರ ಕುಟುಂಬಸ್ತರಿಗೆ ದುಖ ಬರಿಸುವ ಶಕ್ತಿ ನೀಡಲಿ, ನಾವು ಮುಂದಿನ ದಿನಗಳಲ್ಲಿ ಇನ್ನು ಹೇಚ್ಚಿನ ಸಹಾಯ ಮಾಡಬೇಕಾದಲ್ಲಿ ಅದಕ್ಕು ಸಿದ್ದರಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಬಂದು ಕುಟುಂಬಸ್ತರಿಗೆ ಸಾತ್ವನ ಹೇಳಿದ್ದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಮೃತ ಪಟ್ಟವರಿಗೆ ಗೀತಾ ಶಿವರಾಜ್ ಕುಮಾರ್ ರವರು ತಲಾ 1 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಅಂತೆಯೇ ಇಂದು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ಬೇಟಿ ನೀಡಿದ ಗೀತಾ ಶಿವರಾಜ್ ಕುಮಾರ್ ಅವರು ಮೃತರ ಕುಟುಂಬಗಳಿಗೆ ನಗದು ಹಣ ವಿತರಿಸಿದರು.
Also read: DCಗಳೆಂದರೆ ಮಹಾರಾಜರಲ್ಲ, ಹಾಗೆಂದುಕೊಂಡಿದ್ದರೆ… ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶವೇನು?
ಸಾಂತ್ವಾನ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಅಲ್ಲದೆ ಘಟನೆಯಲ್ಲಿ ತೀರ್ವವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌತಮ್ ಮತ್ತು ಪರಷುರಾಮ್ ರವರಿಗೆ ತಲಾ 1.5 ಲಕ್ಷ ನೀಡಿ ಮಾನವಿಯತೆ ಮೆರೆದರು.
ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಮುಂದಿನ ವಿದ್ಯಾಬ್ಯಾಸದ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದರು. ಇನ್ನು ಇಗಾಗಲೆ ಚಿಕಿತ್ಸೆ ಪಡೆದು ಮನೆಗೆ ಬಂದಂತಹ ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post