ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಕಲ್ಲಪ್ಪನ ಕೇರಿಯಲ್ಲಿ ಅಕ್ರಮವಾಗಿ ಸಾಗುವನಿ ಸೈಜುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಶಂಕರ ವಲಯ ಸಿಬ್ಬಂದಿಗಳು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಆಯನೂರಿನ ಲಾಡಿರ್‍ಕೇರಿ ನಿವಾಸಿ ಸಯ್ಯದ್ ಉಸ್ಮಾನ್, ಆಯನೂರಿನ ಸಾಲುಮನೆ ನಿವಾಸಿ ಸುಬೇರ್ ಉಲ್ಲಾ ಹಾಗೂ ಜಿಯಾಉಲ್ಲಾ ಮತ್ತು ಇತರರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ಆರೋಪಿಗಳಿಂದ ಸಾಗುವನಿ ಸೈಜು ಮತ್ತು ಮಾರುತಿ ಓಮಿನಿಯನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆ ವೇಳೆ ವಲಯ ಅರಣ್ಯಾಧಿಕಾರಿಗಳಾದ ಗಿರೀಶ್ ಸಂಕ್ರಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅಬ್ದುಲ್ ಮಜೀದ್, ಉಮೇಶ್ ನಾಯ್ಕ್, ಅರಣ್ಯ ರಕ್ಷಕರಾದ ಅವಿನಾಶ್.ಜಿ, ಆನಂದ.ಜೆ, ನೀಲಮ್ಮ ದಾದ್ಮಿ, ಚೆಲುವಮಣಿ, ಮಂಜುನಾಥ.ಬಿ.ಬಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post