ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ನವರಿಗೆ ಶಿವಮೊಗ್ಗದಲ್ಲಿ ಕಾರ್ಯಕರ್ತರಿಲ್ಲ. ಅದಕ್ಕಾಗಿ ಅವರ ಸಂಬಂಧಿಕರು ಅದರಲ್ಲೂ ಹೆಣ್ಣುಮಕ್ಕಳು ಮನೆಮನೆಗೆ ಕರಪತ್ರ ಹಂಚುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಇಂದು ಬಿ.ಎಸ್. ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಮಹಿಳೆಯರು ಕರಪತ್ರ ಹಂಚುತ್ತಿರುವುದನ್ನು ನೋಡಿ, ಯಡಿಯೂರಪ್ಪನವರು ಕಾಂಗ್ರೆಸ್ ದಂಡು ಬಂದಿದೆ ಎಂದಿದ್ದಾರಷ್ಟೆ ಎಂದರು.
ಜಿಲ್ಲೆಯಲ್ಲಿ ಭದ್ರಾವತಿ ಕ್ಷೇತ್ರ ಸ್ವಲ್ಪ ಕಠಿಣವಿದೆ. ಇನ್ನುಳಿದ ಕ್ಷೇತ್ರದಲ್ಲಿ ನಿರಾಯಾಸ ಗೆಲುವು ಸಿಗಲಿದೆ. ಭದ್ರಾವತಿ ಕ್ಷೇತ್ರದ ಗೆಲುವೂ ಸಹ ಸಾಧಿಸುವ ಪ್ರಯತ್ನ ಮಾಡುತ್ತೇವೆ ಎಂದರು.
Also read: ಪಿಯು ಫಲಿತಾಂಶ: ರಾಜ್ಯಕ್ಕೆ 3ನೆಯ ರ‍್ಯಾಂಕ್ ಮುಡಿಗೇರಿಸಿಕೊಂಡ ಶುಭಶ್ರೀ
ಸಿದ್ದರಾಮಯ್ಯನವರು ಅವರ ಸ್ಥಾನ ಗೆಲ್ಲುವುದೂ ಅಸಾಧ್ಯವಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮಕ್ಕೇ ಏನು ಬೇಕೋ ಅದೆಲ್ಲ ಮಾತನಾಡುತ್ತಿದ್ದಾರೆ. ಅಮಿತ್ ಶಾ, ನರೇಂದ್ರ ಮೋದಿ ಅವರು ರಾಜ್ಯದಲ್ಲಿ ವ್ಯಾಪಕ ಪ್ರಚಾರ ಮಾಡುತ್ತಾರೆ. ಬಿಜೆಪಿ ಗೆಲುವು ಸಾಧಿಸಿದ ನಂತರ ರಾಜ್ಯದಿಂದ ಹೋಗುತ್ತಾರೆಂದರು.
ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬಂದರೆ ಸ್ವಾಗತ. ಅವರು ಶಿವಮೊಗ್ಗಕ್ಕೆ ಬಂದರೆ ನಮ್ಮ ಅಭ್ಯರ್ಥಿ ಗೆಲುವು ಇನ್ನಷ್ಟು ಸುಗಮವಾಗಲಿದೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















